ಚೆನ್ನೈ: `ಬಸ್ ಡೇ’ ಆಚರಣೆ ಸಂಭ್ರಮದಲ್ಲಿ ಮುಳುಗಿದ್ದ ವಿದ್ಯಾರ್ಥಿಗಳು ಬಸ್ ಮೇಲಿಂದ ಮುಕ್ಕರಿಸಿ ಬಿದ್ದ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಈ ದೃಶ್ಯದ ವಿಡಿಯೋ ಸದ್ಯ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.
ತಮಿಳುನಾಡಿನ ಪಚೈಯಪ್ಪ ಕಾಲೇಜು ವಿದ್ಯಾರ್ಥಿಗಳು ಬಸ್ ಡೇ ಆಚರಿಸಲು ನಗರದ ರಸ್ತೆಗಳಲ್ಲಿ ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಬಸ್ ಚಾಲಕ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಬಸ್ ಟಾಪ್ ಮೇಲೆ ಕುಳಿತ್ತಿದ್ದ ವಿದ್ಯಾರ್ಥಿಗಳು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.
Advertisement
Advertisement
ವಿಡಿಯೋದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದನ್ನ ಗಮನಿಸಬಹುದು. ಜೊತೆಗೆ ಬಸ್ ಡೇ ಆಚರಿಸುತ್ತಿದ್ದ ಹಿನ್ನೆಲೆ ಬಸ್ ಟಾಪ್ ಏರಿ ಕೆಲ ವಿದ್ಯಾರ್ಥಿಗಳು ಕಾಲೇಜಿನ ಸ್ಲೋಗನ್, ಬಾವುಟ ಹಿಡಿದು ಚಲಿಸುತ್ತ ಬಸ್ ಮೇಲೆ ಕುಣಿಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
Advertisement
ಹೀಗೆ ಮೆರವಣಿಗೆ ಸಾಗುತ್ತಿದ್ದ ವೇಳೆ ಬಸ್ ಮುಂದೆ ಇದ್ದ ಬೈಕ್ ಸವಾರ ಬ್ರೇಕ್ ಹಾಕಿದ್ದು, ಬಸ್ ಚಾಲಕ ಕೂಡ ಬ್ರೇಕ್ ಹಾಕಿದ್ದಾನೆ. ಪರಿಣಾಮ ಬಸ್ ಟಾಪ್ ಮೇಲಿದ್ದ ವಿದ್ಯಾರ್ಥಿಗಳು ಆಯತಪ್ಪಿ ವಾಹನದ ಮುಂದೆ ಬಿದ್ದು ಗಾಯಗೊಂಡಿದ್ದಾರೆ.
Advertisement
ಈ ಘಟನೆ ನಡೆದ ಬಳಿಕ ಪೊಲೀಸರು ಇಂತಹ ಅಪಾಯಕಾರಿ ಕೆಲಸಕ್ಕೆ ಕೈಹಾಕಿದ್ದ ವಿದ್ಯಾರ್ಥಿಗಳ ಮೇಲೆ ಕಾಲೇಜು ಆಡಳಿತ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೂ ಕೂಡ ಮೆರವಣಿಗೆಯನ್ನು ನಿಲ್ಲಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೂ ಕೂಡ ಖಾಕಿ ಮಾತಿಗೆ ಬೆಲೆ ಕೊಡದೆ ವಿದ್ಯಾರ್ಥಿಗಳು ಮೆರವಣಿಗೆಯನ್ನು ಮುಂದುವರಿಸಿದ್ದಾರೆ. ಹೀಗಾಗಿ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಮಾಹಿತಿ ಪತ್ತೆ ಹಚ್ಚಲು ಮುಂದಾಗಿದ್ದು, ಪೊಲೀಸರಿಗೆ ಕೆಲವರ ಮಾಹಿತಿ ದೊರಕಿದೆ ಎಂದು ವರದಿಯಾಗಿದೆ.
#WATCH College students in Chennai sit & climb on top of moving buses and hang from window bars of a bus during Bus Day celebrations, yesterday; Police detained 24 students in connection with the incident. pic.twitter.com/TI77ogTNxc
— ANI (@ANI) June 18, 2019
https://www.youtube.com/watch?v=-AEoXntfCLc