BelgaumDistrictsKarnatakaLatestMain Post

ನಿಂತ ಲಾರಿಗೆ ಬೈಕ್ ಡಿಕ್ಕಿ: ಇಬ್ಬರು ಯುವಕರು ಸಾವು

ಬೆಳಗಾವಿ: ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಇಬ್ಬರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಂಭವಿಸಿದೆ.

ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸಮೀಪದಲ್ಲಿರುವ ಬರ್ಡೆ ಧಾಭಾ ಬಳಿ ಈ ದುರ್ಘಟನೆ ನಡೆದಿದೆ. ನಿನ್ನೆ ರಾತ್ರಿ ಬರ್ಡೆ ಧಾಭಾ ಬಳಿ, ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿಯ ಚವ್ಹಾಟ ಗಲ್ಲಿಯ ಯುವಕ ಶ್ರೀನಾಥ್ ಡಿ.ಪವಾರ, ಸದಾಶಿವ ನಗರದ ಯುವಕ ರುಚಿತ ಆರ್.ಧುಮಾವತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ತಲ್ವಾರ್‌ನಿಂದ ಕೇಕ್ ಕತ್ತರಿಸಿ ಬರ್ತ್‍ಡೇ ಆಚರಿಸಿಕೊಂಡ ಡಾಬಾ ಮಾಲೀಕ

ಅಪಘಾತದಲ್ಲಿ ಮೃತಪಟ್ಟ ಇಬ್ಬರೂ ಲಿಂಗರಾಜ್ ಕಾಲೇಜಿನಲ್ಲಿ ಬಿ.ಕಾಂ ಪದವಿಯ ಕೊನೆಯ ವರ್ಷದ ವಿದ್ಯಾರ್ಥಿಗಳು ಎಂಬ ಮಾಹಿತಿ ಲಭ್ಯವಾಗಿದೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: 6,50,000 ರೂ.ಗೆ ದೇವರ ತೆಂಗಿನಕಾಯಿ ಖರೀದಿಸಿದ ಭಕ್ತ!

Leave a Reply

Your email address will not be published. Required fields are marked *

Back to top button