ಬೆಂಗಳೂರು: ಪ್ರತಿಷ್ಠಿತ ಕಾಲೇಜು ಅವರಣ (College Campus) ದಲ್ಲಿ ನಡೆದ ವಿದ್ಯಾರ್ಥಿನಿ ಲಯಸ್ಮಿತಾ ಕೊಲೆ ಇಡೀ ಬೆಂಗಳೂರನ್ನೆ ನಡುಗಿಸಿತ್ತು. ಕಾಲೇಜಿಗೆ ತಮ್ಮ ಮಕ್ಕಳನ್ನ ಕಳುಹಿಸಲು ಪೋಷಕರು ಭಯಪಡುವಂತಾಗಿತ್ತು. ಇದರಿಂದ ಎಚ್ಚೆತ್ತಿರುವ ಪೊಲೀಸರು ಇಲಾಖೆ ಬೆಂಗಳೂರು ಗ್ರಾಮಾಂತರದ ಠಾಣಾ ವ್ಯಾಪ್ತಿಗಳಲ್ಲಿ ಬರುವ ಎಲ್ಲಾ ಕಾಲೇಜುಗಳಿಗೆ ಹೊಸ ಗೈಡ್ ಲೈನ್ (New Guidelines For College) ಹೊರಡಿಸಿದೆ. ಕಾಲೇಜು ಆಡಳಿತ ಮಂಡಳಿಗಳು ಇನ್ಮುಂದೆ ಈ ಹೊಸ ಗೈಡ್ ಲೈನ್ಸ್ ಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಪೊಲೀಸರು ತಾಕೀತು ಮಾಡಿದ್ದಾರೆ.
Advertisement
ಲಯಸ್ಮಿತಾ (Layasmitha) ಕೊಲೆಗೆ ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಂಡು ಬಂದಿದ್ದರಿಂದ ಪೊಲೀಸರು ಒಂದಷ್ಟು ಅಂಶಗಳನ್ನ ಫೈಂಡೌಟ್ ಮಾಡಿ ಪಬ್ಲಿಕ್ ಸೇಪ್ಟಿ ಆಕ್ಟ್ ಅಡಿಯಲ್ಲಿ ಹೊಸ ಗೈಡ್ ಲೈನ್ ಹೊರಡಿಸಿದ್ದಾರೆ. ಇದನ್ನೂ ಓದಿ: ನಗರ ಭಾಗದಲ್ಲೂ ಕಂಬಳ ಕಹಳೆ- ಕಾಂತಾರದಿಂದ ಮತ್ತಷ್ಟು ರಂಗೇರಿದ ಹವಾ
Advertisement
Advertisement
ಕಾಲೇಜುಗಳಿಗೆ ನಯಾ ಗೈಡ್‍ಲೈನ್ಸ್: ಕಾಲೇಜು ಅವರಣದಲ್ಲಿ, ಪಾರ್ಕಿಂಗ್ ಲಾಟ್‍ನಲ್ಲಿ ಸಿಸಿಟಿವಿ ಕಡ್ಡಾಯವಾಗಿರಬೇಕು. ಹೊರಗಡೆಯಿಂದ ಬೈಕ್‍ನಲ್ಲಿ ಬರುವವರನ್ನ ಪರಿಶೀಲಿಸಬೇಕು. ಎಂಟ್ರಿ-ಎಕ್ಸಿಟ್ ಗೇಟ್‍ನಲ್ಲಿ ಭದ್ರತೆಯನ್ನ ಹೆಚ್ಚಿಸಿ ಕೊಡಬೇಕು. ಐಡಿ ಕಾರ್ಡ್ ಇರದೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಾರದು. ಗಲಾಟೆ ಸಂದರ್ಭ ಎದುರಾದರೆ ಪೊಲೀಸರಿಗೆ ತಿಳಿಸಬೇಕು. ಇಷ್ಟಲ್ಲದೇ ವಿದ್ಯಾರ್ಥಿಗಳ ರಕ್ಷಣೆಗೆ ಪೊಲೀಸರು ಕೂಡ ಪಬ್ಲಿಕ್ ಸೆಪ್ಟಿ ಆಕ್ಟ್ ಅಡಿಯಲ್ಲಿ ಸೂಕ್ತ ಭದ್ರತೆಗೆ ಸಿದ್ಧಮಾಡಿಕೊಂಡಿದ್ದಾರೆ.
Advertisement
ಹೀಗೆ ಲಯಸ್ಮಿತಾ ಕೊಲೆಯ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಖಾಕಿ ಪಡೆ ಹೊಸ ಗೈಡ್ ಲೈನ್ಸ್ ಹೊರಡಿಸಿದೆ. ಹಾಗೆ ಕಡ್ಡಾಯವಾಗಿ ಎಲ್ಲಾ ಖಾಸಗಿ ಕಾಲೇಜು ಆಡಳಿತ ಮಂಡಳಿಗಳು ಗೈಡ್‍ಲೈನ್ಸ್ ಪಾಲನೆ ಮಾಡಬೇಕು. ಒಂದು ವೇಳೆ ಗೈಡ್‍ಲೈನ್ಸ್ ಉಲ್ಲಂಘನೆ ಮಾಡುವ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಣ್ಯವಾಗಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನ ಪೊಲೀಸರು ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k