ಬೈಕ್ ನಿಲ್ಲಿಸಿ ಎಳೆದಾಡಿ, ಕಪಾಳಕ್ಕೆ ಹೊಡೆದು ಎದೆ ಮುಟ್ಟಿ ನನ್ನನ್ನು ತಳ್ಳಿದ್ರು!

Public TV
1 Min Read
bng molestation

– ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು: ಕಾಲೇಜು ವಿದ್ಯಾರ್ಥಿನಿ ಮೇಲೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ಬ್ಯಾಂಕ್ ಬಳಿ ಭಾನುವಾರ ರಾತ್ರಿ ಲೈಂಗಿಕ ದೌರ್ಜನ್ಯ ನಡೆದಿದೆ.

ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆ ಬೈಕಿನಲ್ಲಿ ಬರುತ್ತಿದ್ದಾಗ ದೌರ್ಜನ್ಯ ನಡೆದಿದ್ದು, ಲೀಸರು ಮಂಜುನಾಥ್, ರವಿ, ಕೃಷ್ಣಾ, ಪ್ರವೀಣ್ ರನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿನಿಯ ದೂರಿನಲ್ಲಿ ಏನಿದೆ?
19ರ ರಾತ್ರಿ 9 ಗಂಟೆಯ ವೇಳೆ ನಾನು ಸ್ನೇಹಿತನ ಜೊತೆ ದ್ವಿಚಕ್ರ ವಾಹನದಲ್ಲಿ ವಿಮಾನ ನಿಲ್ದಾಣದಿಂದ ಬೆಂಗಳೂರು ಕಡೆಗೆ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದೆವು. ಈ ವೇಳೆ ಎ2ಬಿ ಮತ್ತು ವಿದ್ಯಾನಗರ ಕ್ರಾಸ್ ನಡುವೆ ಬರಬೇಕಾದರೆ ಆಕ್ಟೀವಾದಲ್ಲಿ ಬಂದಂತಹ ವ್ಯಕ್ತಿಯೊಬ್ಬ ನಮ್ಮ ಬೈಕಿಗೆ ಅಡ್ಡವಾಗಿ ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.

ಈ ವೇಳೆ ನಾವು ಆತನನ್ನು ನೀನು ವಿರುದ್ಧ ದಿಕ್ಕಿನಿಂದ ಬರುತ್ತಿದ್ದೀಯ ಎಂದು ಪ್ರಶ್ನಿಸಿದ್ದಕ್ಕೆ ಆತನು ಬೈಕಿನಿಂದ ಕೆಳಗಡೆ ಇಳಿದು ನಮ್ಮ ವಾಹನದ ಕೀಯನ್ನು ತೆಗೆದುಕೊಂಡನು. ಈ ವೇಳೆ ಸ್ಥಳದಲ್ಲಿ ಆಟೋ ಡ್ರೈವರ್‍ಗಳು ಮತ್ತು ಇತರೇ 40-45 ಮಂದಿ ಸ್ಥಳೀಯರು ಸುತ್ತುವರೆದರು. ಸೇರಿದ ವ್ಯಕ್ತಿಗಳಲ್ಲಿ ಕೆಲವರು ನನ್ನ ಕಪಾಳಕ್ಕೆ ಹೊಡೆದರು. ಅಷ್ಟೇ ಅಲ್ಲದೇ ನನ್ನ ಸ್ನೇಹಿತನ ಮೇಲೂ ಹಲ್ಲೆ ನಡೆಸಿದರು. ಇವರು ನನ್ನ ದೇಹದ ಎಲ್ಲ ಭಾಗಗಳನ್ನು ಮುಟ್ಟಿದರು. ನನ್ನ ಎದೆಯ ಭಾಗವನ್ನು ಮುಟ್ಟಿ ನೀವು ಬೆಂಗಳೂರಿನವರಲ್ಲ ಎಂದು ಬೆದರಿಕೆ ಹಾಕಿ ಕೆಳಗಡೆ ದೂಡಿದರು. ನಂತರ ನಾವು ಬೇಡಿಕೊಂಡು ಗಾಡಿ ಕೀಯನ್ನು ಪಡೆದು ಅಲ್ಲಿಂದ ಹೊರಟೆವು. ಇದಾದ ಬಳಿಕ ತಾಯಿಗೆ ಕರೆ ಮಾಡಿ ತಿಳಿಸಿದೆ. ನಮ್ಮನ್ನು ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ಮಾಡಿ, ಬೆದರಿಕೆ ಹಾಕಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಗಳನ್ನು ಜರಗಿಸಬೇಕೆಂದು ಕೇಳಿಕೊಳ್ಳುತ್ತೇನೆ.

bng molestation 3

bng molestation 2

Share This Article
Leave a Comment

Leave a Reply

Your email address will not be published. Required fields are marked *