ಜೈಪುರ: 11ನೇ ಮಹಡಿಯಿಂದ ಖಾಲಿ ಲಿಫ್ಟ್ ಕೆಳಗೆ ಬಿದ್ದು, ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ (Rajasthan) ಜೈಪುರದ ( Jaipur) ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ.
ಜೈಪುರದ ಅಜ್ಮೀರ್ ರಸ್ತೆಯಲ್ಲಿರುವ (Ajmer Road) ಮೈ ಹವೇಲಿ ಅಪಾರ್ಟ್‍ಮೆಂಟ್‍ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಇದೀಗ ಅಪಾರ್ಟ್‍ಮೆಂಟ್ ನಿವಾಸಿಗಳು ಬಿಲ್ಡರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಪೋಷಕರು ಐಫೋನ್ ಕೊಡಿಸಿಲ್ಲವೆಂದು ಖಿನ್ನತೆಗೊಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ
Advertisement
Advertisement
ಮೃತ ವಿದ್ಯಾರ್ಥಿಯನ್ನು ಕುಶಾಗ್ರಾ ಮಿಶ್ರಾ ಎಂದು ಗುರುತಿಸಲಾಗಿದ್ದು, ಈ ವಾರಣಾಸಿ ನಿವಾಸಿಯಾಗಿದ್ದಾನೆ ಮತ್ತು ಮಣಿಪಾಲ ವಿಶ್ವವಿದ್ಯಾಲಯದಲ್ಲಿ (Manipal University) ಎರಡನೇ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಅಜ್ಮೀರ್ ರಸ್ತೆಯಲ್ಲಿರುವ ಬಾಡಿಗೆ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಾ ಓದುತ್ತಿದ್ದನು. ಆದರೆ ಭಾನುವಾರ ರಾತ್ರಿ 11ನೇ ಮಹಡಿಯಿಂದ ಕೆಳಗೆ ಹೋಗಲು ಲಿಫ್ಟ್ ಬಟನ್ ಪ್ರೆಸ್ ಮಾಡಿದ್ದಾನೆ.
Advertisement
ಈ ವೇಳೆ ಲಿಫ್ಟ್‌ನ ಬಾಗಿಲು ಓಪನ್ ಆಗಿದ್ದು, ಲಿಫ್ಟ್ ಒಳಗೆ ಯಾರು ಕೂಡ ಇರಲಿಲ್ಲ. ಬಳಿಕ ಲಿಫ್ಟ್ ಒಳಗೆ ಕಾಲನ್ನು ಇಡುತ್ತಿದ್ದಂತೆ 11ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಇದೀಗ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೋಟೆಲ್ ಮಾಲೀಕನಿಗೆ ಬುದ್ಧಿ ಕಲಿಸಲು ಸಿಎಂ ಏಕನಾಥ್ ಶಿಂಧೆಗೆ ಬೆದರಿಕೆಯೊಡ್ಡಿದ್ದವ ಅರೆಸ್ಟ್
Advertisement
ಲಿಫ್ಟ್ ಕೆಟ್ಟು ಹೋಗಿದೆ ಎಂದು ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುವವರು ಎಷ್ಟೇ ಹೇಳಿದರೂ ಬಿಲ್ಡರ್ ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸಿರಲಿಲ್ಲ. ಹೀಗಾಗಿ ರೊಚ್ಚಿಗೆದ್ದ ಅಪಾರ್ಟ್‍ಮೆಂಟ್ ನಿವಾಸಿಗಳು ಬಿಲ್ಡರ್ ವಿರುದ್ಧ ದೂರು ದಾಖಲಿಸಿದ್ದಾರೆ.