ಪ್ರೊಫೆಸರ್ ಕೆಲಸ ಬಿಟ್ಟು ಫಿಶ್ ಫ್ರೈ ಮಾರಾಟ- ತಿಂಗಳಿಗೆ 1 ಲಕ್ಷ ರೂ. ಸಂಪಾದನೆ

Public TV
1 Min Read
proffesor

– ಮೆಕ್ಯಾನಿಕಲ್ ಎಂಜಿನಿಯರಿಂಗ್‍ನಲ್ಲಿ ಪದವಿ

ಚೆನ್ನೈ: ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬರು ಪ್ರೊಫೆಸರ್ ಕೆಲಸ ಬಿಟ್ಟು ಫಿಶ್ ಫ್ರೈ ಮಾರಾಟ ಮಾಡಿ ತಿಂಗಳಿಗೆ ಒಂದು ಲಕ್ಷ ರೂ. ಸಂಪಾದಿಸುತ್ತಿದ್ದಾರೆ.

27 ವರ್ಷದ ಮೋಹನ್ ಕುಮಾರ್ ತಮಿಳುನಾಡಿನ ಕರೂರ್ ನಿವಾಸಿಯಾಗಿದ್ದು, ಅವರ ಕುಟುಂಬಸ್ಥರು ಮೀನಿನ ವ್ಯವಹಾರ ನಡೆಸುತ್ತಿದ್ದು, ಅದಕ್ಕಾಗಿ ಮೋಹನ್ ತಮ್ಮ ಪ್ರೊಫೆಸರ್ ಕೆಲಸವನ್ನು ಬಿಟ್ಟಿದ್ದಾರೆ. ಮೋಹನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದು, ಕರೂರ್ ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.

7050 1330900726 0

ಪಲಾನಿವೇಲ್ ಹಾಗೂ ಸೆಲ್ವಿ ರಾಣಿ, ಮೋಹನ್ ಅವರ ತಂದೆ-ತಾಯಿ ಆಗಿದ್ದು, ಗಾಂಧಿಗ್ರಾಮದಲ್ಲಿ ಫಿಶ್ ಫ್ರೈ ಅಂಗಡಿ ಇಟ್ಟುಕೊಂಡಿದ್ದಾರೆ. ಮೋಹನ್ ಅವರಿಗೆ ಪ್ರೊಫೆಸರ್ ಕೆಲಸ ಬದಲು ಮೀನು ಫೈ ಮಾಡಿ ಮಾರಾಟ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.

ಈ ಬಗ್ಗೆ ಮೋಹನ್ ಮಾತನಾಡಿ, ಕಾಲೇಜು ಮುಗಿದ ನಂತರ ನಾನು ನನ್ನ ಪೋಷಕರಿಗೆ ಸಹಾಯ ಮಾಡುತ್ತಿದ್ದೆ. ಆದರೆ ನನ್ನ ಪೋಷಕರಿಗೆ ಅದು ಇಷ್ಟವಿರಲ್ಲ. ಅವರಿಗೆ ನಾನು ಮೀನು ಮಾರಾಟ ಮಾಡುವುದು ಇಷ್ಟವಿಲ್ಲ. ನಾನು ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ತುಂಬಾ ಆಸೆ ಇಟ್ಟುಕೊಂಡಿದ್ದರು. ಅಲ್ಲದೆ ಎಂಜಿನಿಯರಿಂಗ್ ನಂತರ ನಾನು ಮೀನು ಮಾರಾಟ ಮಾಡುವುದನ್ನು ನೋಡಿ ಹಲವರು ನನಗೆ ಹುಚ್ಚ ಎಂದು ಹೇಳಿದ್ದರು. ಆದರೆ ನಾನು ನನ್ನ ಪ್ರೊಫೆಸರ್ ವೃತ್ತಿಗಿಂತ ಈ ಕೆಲಸವನ್ನು ತುಂಬಾ ಇಷ್ಟಪಡುತ್ತೇನೆ ಎಂದರು.

FISH 1

ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಈ ಅಂಗಡಿಯನ್ನು ಮುಚ್ಚಬೇಕಾಯಿತು. ಆಗ ಈ ವ್ಯವಹಾರದಲ್ಲಿ ಬಂದ ಲಭ ಅದನ್ನು ನಿವಾರಿಸಲು ಸಹಾಯ ಮಾಡಿತು. ನಾನು ಈ ಕೆಲಸದಲ್ಲಿ ತುಂಬಾನೇ ಕಷ್ಟಪಟ್ಟಿದ್ದೇನೆ. ನನ್ನ ಕುಟುಂಬಸ್ಥರು ಕೂಡ ನನಗೆ ಸಹಾಯ ಮಾಡಿಲ್ಲ. ನಾನು ಮೀನುಗಳನ್ನು ಕರೂರ್‍ನ ಹಲವು ಹೋಟೆಲ್‍ಗಳಿಗೆ ಹಾಗೂ ಸಣ್ಣ ಅಂಗಡಿಗಳಿಗೆ ಎರಡು ಮೂರು ಟನ್ ಮೀನು ಹಾಗೂ ಮಾಂಸವನ್ನು ಒದಗಿಸಿ ತಿಂಗಳಿಗೆ ಸುಮಾರು 1 ಲಕ್ಷ ರೂ. ಸಂಪಾದಿಸುತ್ತೇನೆ ಎಂದು ಮೋಹನ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *