ಕಾರವಾರ: ವಿದ್ಯೆ ಕಲಿಸೋ ಶಿಕ್ಷಕ, ಪ್ರಾಂಶುಪಾಲರಿಗೆ ಅತ್ಯುನ್ನತ ಸ್ಥಾನ ಇದೆ. ಆದ್ರೆ ಈ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರು ಪ್ರಾಂಶುಪಾಲನ ಕಾಟದಿಂದ ಪ್ರತಿನಿತ್ಯ ಹಿಂಸೆ ಅನುಭವಿಸ್ತಿದ್ದಾರೆ. ಇರೋ ಕೆಲಸ ಮಾಡೋದು ಬಿಟ್ಟು, ಈ ಪ್ರಾಂಶುಪಾಲ ಇಲ್ಲದ ಕೆಲಸ ಮಾಡಿರುವ ಆರೋಪವೊಂದು ಕೇಳಿಬಂದಿದೆ.
ಹೌದು. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸರ್ಕಾರಿ ನರ್ಸಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರು ಕಾಲೇಜಿನ ಪ್ರಿನ್ಸಿಪಾಲ್‍ನ ಕಾಟಕ್ಕೆ ನಲುಗಿ ಹೋಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಸಂಸ್ಥೆಯ ಪ್ರಾಂಶುಪಾಲ ಗೋವಿಂದಪ್ಪ ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಡ್ತಿದ್ದಾನೆ. 80 ಜನ ವಿದ್ಯಾರ್ಥಿನಿಯರು ಇರೋ ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ವಿನಾಕಾರಣ ಹಣ ಪೀಕ್ತಾನೆ ಅಂತ ಆರೋಪಿಸಲಾಗಿದೆ.
Advertisement
Advertisement
ಮಾತ್ರವಲ್ಲ ಹಣ ನೀಡದ ವಿದ್ಯಾರ್ಥಿನಿಯರಿಗೆ ಕಾಲೇಜಿನಿಂದ ತೆಗೆದು ಹಾಕುತ್ತೇನೆ. ಇಂಟರ್ನಲ್ ಅಂಕಗಳನ್ನ ಕೊಡಲ್ಲ ಅಂತಾ ಬೆದರಿಕೆ ಸಹ ಹಾಕುತ್ತಿದ್ದನು. ಇದ್ರಿಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೂ ಕೂಡ ಯತ್ನಿಸಿದ್ದಾಳೆ. ಇಷ್ಟೇ ಅಲ್ಲ ಈತನ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೂಡ ಕೇಳಿ ಬರ್ತಿದ್ದು, ವಿದ್ಯಾರ್ಥಿನಿಯರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
Advertisement
ಈ ಬಗ್ಗೆ ಸ್ವತಃ ಗೋವಿಂದಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಸತ್ಯಕ್ಕೆ ದೂರವಾದಂತಹ ಮಾತಾಗಿದೆ. ವೈಯಕ್ತಿಕ ದ್ವೇಷಕ್ಕೋಸ್ಕರವೇ ನನ್ನ ಮೇಲೆ ಈ ಆರೋಪಗಳನ್ನು ಮಾಡುತ್ತಿದ್ದಾರೆ. 80 ಜನ ಮಕ್ಕಳು ಹಾಗೂ 80 ಜನ ಪೋಷಕರನ್ನು ಕರೆಸಿ ಒಂದು ವಿದ್ಯಾರ್ಥಿನಿಯಿಂದ ಪ್ರೂವ್ ಮಾಡಿಸಿ. ಯಾವ ಶಿಕ್ಷೆಗೂ ನಾನು ಸಿದ್ಧನಿದ್ದೇನೆ ಅಂತ ತನ್ನ ಮೇಲೆ ಕೇಳಿಬರುತ್ತಿರುವ ಆರೋಪವನ್ನು ಅಲ್ಲಗೆಳೆದಿದ್ದಾನೆ.
Advertisement
ವಿದ್ಯಾರ್ಥಿನಿಯರು ಕಾಲೇಜಿಗೆ ಬರದಿದ್ರೂ ಬೇಕಾಬಿಟ್ಟಿ ಹಾಜರಾತಿ ಕೊಟ್ಟಿದ್ದಾನಂತೆ. ಸಾಮಾಜಿಕ ಕಾರ್ಯಕರ್ತನೋರ್ವ ಆರ್.ಟಿಐ ಮೂಲಕ ಪಡೆದಿರುವ ಮಾಹಿತಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಈ ಬಗ್ಗೆ ವಿದ್ಯಾರ್ಥಿನಿಯರು ಕಾಲೇಜಿನ ಉನ್ನತ ಅಧಿಕಾರಿಗಳಿಗೆ, ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರನ್ನ ಸಹ ನೀಡಿದ್ದಾರೆ.
ಪ್ರಾಂಶುಪಾಲನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆಯೇ ಮೇಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುವಂತೆ ಸಂಸ್ಥೆಯ ಅಧಿಕಾರಿಗಳು ಸೂಚಿಸಿದ್ದಾರೆ. ಆರೋಪ ಖಚಿತವಾದರೆ ಶಿಸ್ತುಕ್ರಮ ಕೈಗೊಳ್ತೀವಿ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv