Connect with us

Cinema

ಸ್ಯಾಂಡಲ್‍ ವುಡ್‍ ನಲ್ಲಿಂದು ಹೊಸಬರ ಕಲರವ – ತೆರೆಗೆ ಬರ್ತಿದೆ `ಕಾಲೇಜ್ ಕುಮಾರ್’, `ಸಂಯುಕ್ತ-2′

Published

on

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈ ವಾರ ಹೊಸಬರ ಗಾನಬಜಾನ. ಒಳ್ಳೆಯ ಸಿನಿಮಾ ಯಾವುದೋ ಆ ಚಿತ್ರಕ್ಕೆ ಸಿಗುತ್ತೆ ಸನ್ಮಾನ.

ಹೌದು. ಈ ವಾರ ಸ್ಯಾಂಡಲ್ ವುಡ್ ಸಿಲ್ವರ್ ಸ್ಕ್ರೀನ್ ನಲ್ಲಿ ಎರಡು ಹೊಸ ಚಿತ್ರಗಳು ಚಿತ್ತಾರವಾಗುತ್ತಿವೆ. ಒಂದು `ಕಾಲೇಜ್ ಕುಮಾರ’ ಇನ್ನೊಂದು `ಸಂಯುಕ್ತ-2′. ಈ ಎರಡು ಸಿನಿಮಾಗಳು ಅವುಗಳದ್ದೇ ಆದ ಸ್ಪೆಷಾಲಿಟಿ ಹೊತ್ತು ಬರುತ್ತಿವೆ.

ಡವ್, ಅಲೆಮಾರಿ ಖ್ಯಾತಿಯ ಸಂತು ಅಲಿಯಾಸ್ ಹರಿ ಸಂತೋಷ್ ನಿರ್ದೇಶನದಲ್ಲಿ `ಕಾಲೇಜ್ ಕುಮಾರ’ ಮೂಡಿಬಂದಿದೆ. ಈಗಾಗಲೇ ಟ್ರೈಲರ್ ಹಾಗೂ ಹಾಡುಗಳಿಂದ ಪ್ರೇಕ್ಷಕರಲ್ಲಿ ತಂಗಾಳಿ ಮೂಡಿಸಿದೆ. `ಕೆಂಡಸಂಪಿಗೆ’ ಸಿನಿಮಾದ ನಾಯಕ ವಿಕ್ಕಿಗೆ `ಕಿರಿಕ್ ಪಾರ್ಟಿ’ ಸಂಯುಕ್ತ ಹೆಗಡೆ ಜೋಡಿಯಾಗಿದ್ದಾರೆ.

ಇನ್ನು 1988ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿದ ಮೊದಲ ಹಾರರ್ ಕಮ್ ಥ್ರಿಲ್ಲರ್ ಸಿನಿಮಾ `ಸಂಯುಕ್ತ’. 26 ವರ್ಷದ ನಂತರ ಮತ್ತೊಮ್ಮೆ ಅದೇ ಹೆಸರಿನಲ್ಲಿ ಸಂಯುಕ್ತ-2 ಚಿತ್ರ ಬರಲು ಸಜ್ಜಾಗುತ್ತಿದೆ. ಆ ಸಂಯುಕ್ತಕ್ಕೂ ಈ ಸಂಯುಕ್ತಕ್ಕೂ ಯಾವುದೇ ಸಂಬಂಧವಿಲ್ಲ, ಆದರೆ ಸಾಮ್ಯತೆ ಇದೆ. ಈ ಎರಡೂ ಸಿನಿಮಾಗಳು ಹಾರರ್-ಸಸ್ಪೆನ್ಸ್-ಥ್ರಿಲ್ಲರ್ ಕಹಾನಿ ಆಧರಿಸಿವೆ.

ಚೇತನ್ ಚಂದ್ರ, ನೇಹಾ ಪಾಟೀಲ್, ಐಶ್ವರ್ಯ ಸಿಂಧಗಿ ಹಾಗೂ ಪ್ರಭು ಸೂರ್ಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ಡೈನಮಿಕ್ ಸ್ಟಾರ್ ದೇವರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿರಾಮ್ ನಿರ್ದೇಶನ ಮಾಡಿದ್ದಾರೆ. ಒಟ್ಟಿನಲ್ಲಿ ಈ ಎರಡು ಸಿನಿಮಾಗಳಲ್ಲಿ ಯಾವುದಕ್ಕೆ ಪ್ರೇಕ್ಷಕ ಪ್ರಭುಗಳು ಜೈ ಎನ್ನುತ್ತಾರೋ ಕಾದು ನೋಡಬೇಕು.

https://www.youtube.com/watch?v=4pHYE9HDv2s

https://www.youtube.com/watch?v=1wY2dm3bNX8

 

 

Click to comment

Leave a Reply

Your email address will not be published. Required fields are marked *