ಕೋಲಾರ: ಹೇ ಎತ್ತಾಕು, ಅಂತ ಕೂಗುತ್ತಾ, ಶಿಳ್ಳೆ ಚಪ್ಪಾಳೆ ಹೊಡೆಯುತ್ತಾ ಹುರಿದುಂಬಿಸುತ್ತಿರುವ ವಿದ್ಯಾರ್ಥಿಗಳು. ಹಣಾಹಣಿಯಲ್ಲಿ ಮಲ್ಲಯುದ್ಧ ಮಾಡುತ್ತಾ ಥೇಟ್ ಪೈಲ್ವಾನ್‍ಗಳಾಗಿರುವ ವಿದ್ಯಾರ್ಥಿನಿಯರು. ಕ್ಷಣ ಕ್ಷಣಕ್ಕೂ ರೋಮಾಂಚನ ಸೃಷ್ಟಿಸುತ್ತಿದ್ದ ಯುವತಿಯರ ಜಟ್ಟಿ ಕಾಳಗ ಇಂದು ಕೋಲಾರದ ಮಹಿಳಾ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ನೋಡಗರ ಕಣ್ಮನ ಸೆಳೆಯಿತು.
Advertisement
ಹೇ ಹಿಡಿ ಹಿಡಿ, ಸರಿಯಾಗಿ ನೋಡಿ ಪಟ್ಟು ಹಾಕು, ಸರಿಯಾಗಿ ಲಾಕ್ ಮಾಡಿ ಎತ್ತಾಕು, ಹೀಗೆ ರಿಂಗ್‍ನಲ್ಲಿ ಕುಸ್ತಿ ಮಾಡುತ್ತಿರುವ ಕ್ರೀಡಾಳುಗಳಿಗೆ ಹೊರಗೆ ನಿಂತ ಕೋಚ್‍ನಿಂದ ಡೈರೆಕ್ಷನ್ ಮತ್ತೊಂದೆಡೆ ಪಂದ್ಯಾವಳಿ ನೋಡಲು ಜಮಾಯಿಸಿರುವ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಜೋರಾದ ಕೂಗಾಟ, ಶಿಳ್ಳೆ, ಚಪ್ಪಾಳೆ ರಣ ರೋಚಕವಾಗಿ ಒಬ್ಬರನ್ನು ಒಬ್ಬರು ಸೋಲಿಸಿ ಪಂದ್ಯ ಗೆಲ್ಲುಲು ಕುಸ್ತಿ ಪಟುಗಳ ಹೋರಾಟ ಕಂಡು ಬಂದಿದ್ದು ಕೋಲಾರದ ಮಹಿಳಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ. ಹೌದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಎರಡು ದಿನಗಳ ಕಾಲ ಈ ವರ್ಷದ ಅಂತರ ಕಾಲೇಜು ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಇದನ್ನೂ ಓದಿ: 12,000 ಕೆಜಿ ತೂಕದ ಬಸ್ಸನ್ನು ಕೂದಲಿನಿಂದ ಎಳೆದ ಭಾರತೀಯ ಮಹಿಳೆ- Video Viral
Advertisement
Advertisement
ಕ್ರೀಡೆಯಲ್ಲಿ ಅದರಲ್ಲೂ ಕುಸ್ತಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ತುಸು ಕಡಿಮೆಯೇ ಎಂಬ ಮಾತು ಸುಳ್ಳು ಮತ್ತು ವನಿತೆಯರು ಕುಸ್ತಿಯಲ್ಲಿ ಪಾಲ್ಗೊಳ್ಳುವುದಕ್ಕೆ ಹಿಂಜರಿಯುವುದಿಲ್ಲ ಎಂಬುದಕ್ಕೆ ಈ ವೇದಿಕೆ ಸಾಕ್ಷಿಯಾಗಿ ಕಂಡು ಬಂದಿತ್ತು. ಪುರುಷರಷ್ಟೇ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಎರಡು ವರ್ಷಗಳಿಂದ ಕೊರೊನಾದಿಂದ ಕ್ರೀಡೆಯೇ ಇಲ್ಲದೆ ಮಂಕಾಗಿದ್ದ ಕಾಲೇಜು ವಿದ್ಯಾರ್ಥಿಗಳಂತು ಕುಸ್ತಿ ಪಂದ್ಯಾವಳಿಯನ್ನು ನೋಡಿ ಫುಲ್ ಖುಷಿಯಾದ್ರು. ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ರೀತಿ ಎಂಜಾಯ್ ಮಾಡಿದ್ರೆ, ಕುಸ್ತಿ ಪಟುಗಳು ಕೂಡಾ ಅಖಾಡದಲ್ಲಿ ಸೆಣಸಾಡಿ ಖುಷಿ ಪಟ್ಟರು. ಇದನ್ನೂ ಓದಿ: ಕೊರೊನಾ ಸೋಂಕಿತರು 7 ದಿನದಲ್ಲಿ ರಿಕವರಿ ಹೊಂದಿದ್ರೂ, 14 ದಿನ ಕ್ವಾರಂಟೈನ್ ಕಡ್ಡಾಯ: WHO
Advertisement
ಕುಸ್ತಿ ಅಥವಾ ಮಲ್ಲ ಯುದ್ದ ಕೇವಲ ಪುರುಷರಿಗಷ್ಟೇ ಎನ್ನುವ ಕಾಲವೊಂದಿತ್ತು ಆದರೆ ಈಗ ನಾವು ಪುರುಷರಿಗೇನು ಕಡಿಮೆ ಇಲ್ಲಾ ಎನ್ನುವಂತೆ ಮಹಿಳೆಯರು ಹುಮ್ಮಸ್ಸಿನಿಂದಲೇ ಭಾಗವಹಿಸಿದ್ದರು. ಕುಸ್ತಿ ಅಖಾಡದಲ್ಲಿ ಯಾವು ಪುರುಷರಿಗೂ ಕಡಿಮೆ ಇಲ್ಲದಂತೆ ಪಟ್ಟುಗಳನ್ನು ಹಾಕಿ ಎದುರಾಳಿಯನ್ನು ಕೆಡುವುತ್ತಾ ನೋಡುಗರಿಗೆ ರೋಮಾಂಚನ ಹಾಗೂ ಎದೆ ಬಡಿತವನ್ನು ಹೆಚ್ಚಿಸುವಂತೆ ಮಾಡಿತು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಸುಮಾರು 200-250 ಕಾಲೇಜ್‍ಗಳಿದ್ದು, ಅದರಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ವ್ಯಾಪ್ತಿಯ ಸುಮಾರು 30 ಕ್ಕೂ ಹೆಚ್ಚು ಕಾಲೇಜ್‍ನ ವಿದ್ಯಾರ್ಥಿನಿಯರು ಈ ಕುಸ್ತಿ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದರು. ಎರಡು ದಿನಗಳ ಕಾಲ ನಡೆಯುವ ಅಂತರ ಕಾಲೇಜು ಕುಸ್ತಿ ಪಂದ್ಯಾವಳಿಯಲ್ಲಿ 80 ಹೆಚ್ಚು ಮಹಿಳಾ ಕುಸ್ತಿ ಪಟುಗಳು ಅಖಾಡದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಪುರುಷರಷ್ಟೇ ತೊಡೆ ತಟ್ಟಿ ಅಖಾಡಕ್ಕಿಳಿದು ಪೈಲ್ವಾನ್ ರೀತಿಯಲ್ಲಿ ಬಿಲ್ಡಪ್ ಕೊಡುತ್ತಿದ್ದ ಕಾಲದಲ್ಲಿ ಯುವತಿಯರು ನಾವೇನು ಕಡಿಮೆ ಇಲ್ಲ ಎನ್ನುವಂತೆ ಮಹಿಳಾ ಕುಸ್ತಿ ಜಟ್ಟಿಗಳು ಕೂಡಾ ಅಖಾಡದಲ್ಲಿ ಸದ್ದು ಮಾಡಿದ್ರು. ನಿರೀಕ್ಷಿತ ಪ್ರೋತ್ಸಾಹ ಮುಂದೆ ಸಿಕ್ಕರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡೋದ್ರಲ್ಲಿ ಅನುಮಾನವಿಲ್ಲ.