ಶಿವಮೊಗ್ಗ: ಜಿಲ್ಲೆಯ ಮಹಾನಗರ ಪಾಲಿಕೆ ನಿರ್ವಹಣೆಯಲ್ಲಿ ಇರುವ ಗಾಂಧಿ ಪಾರ್ಕ್ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ.
ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ಇರುವ ಪಾರ್ಕಿನಲ್ಲಿ ನಡೆವ ಚಟುವಟಿಕೆಗಳ ಬಗ್ಗೆ ವ್ಯಾಪಕವಾದ ದೂರುಗಳು ಇದ್ದರೂ ಖಚಿತವಾದ ಆಧಾರ ಇರಲಿಲ್ಲ. ಈಗ ಈ ಪಾರ್ಕಿನಲ್ಲಿ ಒಂದಷ್ಟು ಜನ ಹುಡುಗಿಯರು ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಮೂರ್ನಾಲ್ಕು ಜನ ಹುಡುಗಿಯರು ಹಾಗೂ ಹುಡುಗರು ಗಾಂಧಿ ಪಾರ್ಕಿನಲ್ಲಿ ಇರುವ ಕಟ್ಟೆ ಮೇಲೆ ಬೀರ್ ಬಾಟಲುಗಳನ್ನು ಇಟ್ಟುಕೊಂಡು ಕುಡಿದಿದ್ದಾರೆ. ಅಷ್ಟೇ ಅಲ್ಲದೆ ಕೇಕೆ ಹಾಕುತ್ತಾ ಅದನ್ನು ವಿಡಿಯೋ ಮಾಡಿದ್ದಾರೆ. ಬಹಿರಂಗವಾಗಿ ಹಾಡಹಗಲೇ ಎಣ್ಣೆ ಹಾಕಿದ ಈ ಯುವತಿಯರ ಕೃತ್ಯ ಗಂಭೀರವಾಗಿದೆ.
ಈ ವಿಡಿಯೋ ಪಾರ್ಕಿಗೆ ವಾಕಿಂಗ್‍ಗಾಗಿ ಬರುವ ಸಭ್ಯಸ್ಥರಿಗೆ ಶಾಕ್ ನೀಡಿದೆ. ಇಂತಹ ಅನೇಕ ಘಟನೆಗಳಿಗೆ ಗಾಂಧಿ ಪಾರ್ಕ್ ಕೇಂದ್ರವಾಗಿದೆ. ಆದರೆ ಈ ಬಗ್ಗೆ ಮಹಾನಗರ ಪಾಲಿಕೆ ಜಾಣ ಮೌನ ತೋರುತ್ತಿದೆ.