ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯದಿಂದ ಬೆಂಗಳೂರಿಗೆ ರವಾನಿಸಲು ಸಮ್ಮಿಶ್ರ ಸರ್ಕಾರ ಮತ್ತೊಮ್ಮೆ ಕಾಲದ ಮೊರೆ ಹೋಗಿದೆ.
ಅಂಬಿ ಪಾರ್ಥಿವ ಶರೀರ ಬೆಂಗಳೂರಿಗೆ ರವಾನಿಸಲು ರಾಹುಕಾಲ ತಟ್ಟಿದೆ. ರಾಹುಕಾಲದ ಹಿನ್ನಲೆಯಲ್ಲಿ 9 ಗಂಟೆ ನಂತರ ವಿಶ್ವೇಶ್ವರಯ್ಯ ಸ್ಟೇಡಿಯಂನಿಂದ ಪಾರ್ಥಿವ ಶರೀರ ಬೆಂಗಳೂರಿಗೆ ಹೊರಡಲಿದೆ. ಇದನ್ನೂ ಓದಿ:ಬೆಂಗ್ಳೂರಿಗರೇ ಗಮನಿಸಿ, ಅಂಬಿ ಅಂತಿಮ ಯಾನ – ಯಾವ ಸಮಯಕ್ಕೆ ಏನು ನಿಗದಿಯಾಗಿದೆ?
ಈ ಹಿಂದೆ ಬೆಳಗ್ಗೆ 6 ಗಂಟೆಗೆ ಪಾರ್ಥಿವ ಶರೀರ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಆದರೆ ಇಂದು ಬೆಳಗ್ಗೆ 7.30 ರಿಂದ 9 ಗಂಟೆ ವರೆಗೂ ರಾಹುಕಾಲ ಇರುವುದರಿಂದ 9 ಗಂಟೆ ನಂತರ ಪಾರ್ಥಿವ ಶರೀರ ಬೆಂಗಳೂರಿಗೆ ರವಾನೆಯಾಗಲಿದೆ. ಇದನ್ನೂ ಓದಿ: ಕರ್ಮಭೂಮಿಯಲ್ಲಿ ಕರ್ಣನಿಗೆ ನಮನ – ಅಭಿಮಾನಿಗಳನ್ನು ನಿಯಂತ್ರಿಸಲು ವೇದಿಕೆ ಏರಿದ ಯಶ್
ಕಳೆದ ಕೆಲವು ದಿನಗಳಿಂದ ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಶನಿವಾರ ರಾತ್ರಿ ಮೃತಪಟ್ಟಿದ್ದರು. ಮಂಡ್ಯ ಬಸ್ ದುರಂತ ಘಟನೆಯ ಬಳಿಕ ಸುಸ್ತಾಗಿದ್ದ ಅಂಬರೀಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಬರೀಶ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv