ಸಿಲಿಕಾನ್ ಸಿಟಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಚಳಿ – 12 ಡಿಗ್ರಿಗೆ ಕುಸಿಯಲಿದ್ಯಂತೆ ತಾಪಮಾನ

Public TV
1 Min Read
weather 1

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನೇ ದಿನೇ ಚಳಿ ಹೆಚ್ಚಾಗುತ್ತಿದ್ದು, ನಗರದ ತಾಪಮಾನ 12 ಡಿಗ್ರಿಗೆ ಕುಸಿಯುವ ಸಾಧ್ಯತೆಯಿದೆ.

ಹೌದು, ಸಿಲಿಕಾನ್ ಸಿಟಿಯಲ್ಲಿ (Silicon City) ಇದೀಗ ಹೊರಗಡೆ ಹೋಗುವಾಗ ಸ್ವೆಟರ್ ಹಾಕಿ, ಕೈಗೆ ಗ್ಲೌಸ್, ಕಾಲಿಗೆ ಸಾಕ್ಸ್ ಹಾಕುವ ಪರಿಸ್ಥಿತಿ ಉಂಟಾಗಿದೆ. ದಿನಗಳೆದಂತೆ ಚಳಿ ಜಾಸ್ತಿಯಾಗುತ್ತಿದ್ದು, ಸಂಜೆಯಿಂದಲೇ ಚಳಿ ಪ್ರಾರಂಭವಾಗುತ್ತಿದೆ.ಇದನ್ನೂ ಓದಿ: ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಗೆ ಚಾಕು ಇರಿತ – ಕುಡಿದ ಮತ್ತಲ್ಲಿ ಕೃತ್ಯ

ಈ ಬಾರಿ ರಾಜ್ಯಕ್ಕೆ ಮಾಗಿ ಚಳಿ ಬೇಗ ಆಗಮಿಸಿದ್ದು, ಇದರ ಪರಿಣಾಮ ಚಳಿ ಜೊತೆಗೆ ಮಧ್ಯರಾತ್ರಿ ಇಬ್ಬನಿ ಕೂಡ ಶುರುವಾಗಿದೆ. ಇನ್ನಷ್ಟೂ ಚಳಿಯ ಪ್ರಮಾಣ ಹೆಚ್ಚಾಗಲಿದ್ದು, ಬೆಂಗಳೂರು ತಾಪಮಾನ 12 ಡಿಗ್ರಿಗೆ ಇಳಿಯುವ ಸಾಧ್ಯತೆ ಇದೆ. ಈಗಾಗಲೇ ಚಳಿ ಹೆಚ್ಚಿದ್ದು, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಚಳಿ ಜಾಸ್ತಿ ಆಗುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಲಾ ನಿನೊ ಸ್ಥಿತಿಯಿಂದಾಗಿ ಈ ಬಾರಿ ಚಳಿ ಪ್ರಮಾಣ ತೀವ್ರಗೊಂಡಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವ ಮೂನ್ಸುಚನೆಯಿದ್ದು, ಈ ರೀತಿ ಕಡಿಮೆಯಾಗುವುದನ್ನು ಲಾ ನಿನೋ ಎಂದು ಕರೆಯುತ್ತಾರೆ. ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿರುವ ಕಾರಣ ಚಳಿ ಹೆಚ್ಚಾಗಿದೆ.ಇದನ್ನೂ ಓದಿ: ಕಲಬುರಗಿ| ನರ್ಸ್‌ ವೇಷದಲ್ಲಿ ಬಂದ ಮಹಿಳೆಯರಿಂದ ಹಸುಗೂಸು ಕಿಡ್ನ್ಯಾಪ್‌

Share This Article