ಕಲಬುರಗಿ: ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ ಜಿಲ್ಲೆಯಾದ್ಯಂತ (Kalaburagi) ಇದೇ ನವೆಂಬರ್ 20ರ ವರೆಗೆ 4 ದಿನಗಳ ಕಾಲ ಜಿಲ್ಲೆಯಲ್ಲಿ ತಾಪಮಾನವು ಸಾಮಾನ್ಯಕ್ಕಿಂತ (4°C ನಿಂದ 6°C) ಕಡಿಮೆ ಇರುವ ಸಾಧ್ಯತೆಯಿದ್ದು, ಇದು ತೀವ್ರ ಶೀತ ಅಲೆಯ (Cold Wind Warning) ಪರಿಸ್ಥಿತಿಗೆ ಕಾರಣವಾಗಬಹುದು. ಆದರಿಂದ ಜಿಲ್ಲೆಯ ಸಾರ್ವಜನಿಕರು ಅನಗತ್ಯ ಹೊರಗಡೆ ತಿರುಗಾಡಬಾರದು ಮತ್ತು ಪ್ರವಾಸ ಮಿತಗೊಳಿಸಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
#ಶೀತ #ಗಾಳಿ #ಎಚ್ಚರಿಕೆ #cold #wave #Warning @DcBelagavi @deodcbagalkote @DCKalaburagi @bidar_dc @DCVijayapura #coldweather@KarnatakaVarthe #KSNDMC #KarnatakaRains pic.twitter.com/bt2NL0bMBX
— Karnataka State Natural Disaster Monitoring Centre (@KarnatakaSNDMC) November 17, 2025
ಚಳಿ ಮತ್ತು ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದಿರುವ ಅವರು, ವೃದ್ಧರು, ಮಕ್ಕಳು ಬಗ್ಗೆ ಪಾಲಕ ಪೋಷಕರು ಎಚ್ಚರಿಕೆ ವಹಿಸಿಬೇಕು ಎಂದಿದ್ದಾರೆ.
ಏನು ಮಾಡಬೇಕು?
ಶೀತ ಮಾರುತದಿಂದ ಚಳಿಗಾಲದಿಂದ ರಕ್ಷಿಸಲು ಬೆಚ್ಚನೆಯ ಬಟ್ಟೆಗಳನ್ನು ಧರಿಸಬೇಕು. ಸಾಧ್ಯವಾದಷ್ಟು ಒಳಾಂಗಣದಲ್ಲಿರಬೇಕು. ಬಟ್ಟೆ ಒದ್ದೆಯಾಗದಂತೆ ಎಚ್ಚರ ವಹಿಸಬೇಕು. ಒದ್ದೆಯಾದಲ್ಲಿ ದೇಹದ ಶಾಖದ ನಷ್ಟವನ್ನು ತಡೆಯಲು ಬಟ್ಟೆಗಳನ್ನು ತ್ವರಿತವಾಗಿ ಬದಲಾಯಿಸಬೇಕು. ಕೈಗವಸುಗಳನ್ನು ಹಾಕಿಕೊಳ್ಳಬೇಕು. ಮನೆಯಲ್ಲಿಯೇ ರೇಡಿಯೋ ಆಲಿಸಿ, ಟಿವಿ, ದಿನಪತ್ರಿಕೆ ವೀಕ್ಷಿಸುವ ಮೂಲಕ ಹವಾಮಾನ ಮುನ್ಸೂಚನೆ ಅರಿಯಬೇಕು.
ನಿಯಮಿತವಾಗಿ ಬಿಸಿ ಪಾನೀಯಗಳನ್ನು ಕುಡಿಯಬೇಕು. ನೀರಿನ ಪೈಪ್‌ಗಳು ಚಳಿಯಿಂದ ಹೆಪ್ಪುಗಟ್ಟಬಹುದು ನೀರನ್ನು ಸಂಗ್ರಹಿಸಿಕೊಳ್ಳಬೇಕು. ಮರಗಟ್ಟುವಿಕೆ, ಬೆರಳುಗಳು, ಕಾಲ್ಬೆರಳುಗಳು, ಕಿವಿಯೋಲೆಗಳು ಮತ್ತು ಮೂಗಿನ ತುದಿಯಲ್ಲಿ ಬಿಳಿ ಅಥವಾ ಮಸುಕಾದ ನೋಟದಂತಹ ಹಿಮಪಾತದ ಲಕ್ಷಣಗಳ ಬಗ್ಗೆ ಎಚ್ಚರದಿಂದಿರಬೇಕು ಹೈಪೋಥರ್ಮಿಯಾ ಸಂದರ್ಭದಲ್ಲಿ ವ್ಯಕ್ತಿಯನ್ನು ಬೆಚ್ಚಗಿನ ಸ್ಥಳಕ್ಕೆ ಕರೆದೊಯ್ದು ಅವರ ಬಟ್ಟೆಗಳನ್ನು ಬದಲಾಯಿಸಬೇಕು. ಚರ್ಮದಿಂದ ಚರ್ಮ ಸಂಪರ್ಕಿಸುವ ಮೂಲಕ ದೇಹ ಬೆಚ್ಚಗಿರುವಂತೆ ನೋಡಿಕೊಳ್ಳಬೇಕು. ಒಣ ಪದರಗಳ ಕಂಬಳಿಗಳು, ಬಟ್ಟೆಗಳು, ಟವೆಲ್‌ಗಳಿಂದ ವ್ಯಕ್ತಿಯ ದೇಹವನ್ನು ಬೆಚ್ಚಗಿರುವಂತೆ ಎಚ್ಚರ ವಹಿಸಬೇಕು.
ಏನು ಮಾಡಬಾರದು?
ದೇಹದ ಉಷ್ಣತೆಯನ್ನು ಕಡಿಮೆಗೊಳಿಸುವ ಮದ್ಯ ಸೇವಿಸಬಾರದು. ಹಿಮಪಾತವಾದ ದೇಹದ ಭಾಗವನ್ನು ಮಸಾಜ್ ಮಾಡಬೇಡಿ. ಇದು ಹೆಚ್ಚಿನ ಹಾನಿಯನ್ನುಂಟು ಮಾಡಬಹುದು.
ಜಾನುವಾರುಗಳ ಕಾಳಜಿ ಹೇಗೆ?
ಪಶು ಪ್ರಾಣಿಗಳನ್ನು ಸಾಕಿರುವ ಸಾರ್ವಜನಿಕರು ರಾತ್ರಿ ವೇಳೆ ಜಾನುವಾರುಗಳನ್ನು ಶೆಡ್‌ಗಳ ಒಳಗೆ ಇರಿಸಿ ಶೀತದಿಂದ ರಕ್ಷಿಸಲು ಒಣ ಹಾಸಿಗೆಯನ್ನು ಒದಗಿಸಬೇಕು. ಚಳಿಯನ್ನು ನಿಭಾಯಿಸಲು ಮತ್ತು ಪ್ರಾಣಿಗಳು ಆರೋಗ್ಯವಾಗಿರಲು ಮೇವಿನ ಸಾಂದ್ರತೆಯಲ್ಲಿ ಪ್ರೋಟೀನ್ ಮಟ್ಟ ಮತ್ತು ಖನಿಜಗಳನ್ನು ಹೆಚ್ಚಿಸಬೇಕು. ಪ್ರಾಣಿಗಳಿಗೆ ದೈನಂದಿನ ನೀಡುವ ಮೇವು, ಬೇಳೆ ಕಾಳಿನ ಜೊತೆಗೆ ಉಪ್ಪಿನೊಂದಿಗೆ ಖನಿಜ ಮಿಶ್ರಣ ಪೂರೈಸಬೇಕು. ಇದಲ್ಲದೆ ಗೋಧಿ ಧಾನ್ಯ, ಬೆಲ್ಲ ನೀಡಬಹುದು.
ಕೋಳಿ ಸಾಕಣಿಕೆ ಕೇಂದ್ರಗಳಲ್ಲಿ ಕೃತಕ ಬೆಳಕನ್ನು ಒದಗಿಸುವ ಮೂಲಕ ಮರಿಗಳನ್ನು ಬೆಚ್ಚಗಿಡಬಹುದಾಗಿದೆ. ಇನ್ನು ಬೆಳಿಗ್ಗೆ ಸಮಯದಲ್ಲಿ ದನ-ಮೇಕೆಗಳನ್ನು ಮೇಯಲು ಬಿಡಬಾರದು ಮತ್ತು ರಾತ್ರಿ ಸಮಯದಲ್ಲಿ ತೆರೆದ ಸ್ಥಳದಲ್ಲಿ ಇರಿಸಬಾರದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

