– ಫೇಸ್‌ಬುಕ್ ಪ್ರಿಯಕರನನ್ನ ಪತ್ತೆಹಚ್ಚಿದ ತನಿಖೆ ಹಾದಿಯೇ ರೋಚಕ!
ವಿಜಯಪುರ: ಒಂದು ವರ್ಷದ ಹಳೆಯ ಕೋಲ್ಡ್ ಬ್ಲಡ್ ಮರ್ಡರ್ ಕೇಸ್ (Cold Blood Murder Case) ಅನ್ನು ಭೇದಿಸುವಲ್ಲಿ ವಿಜಯಪುರ ಪೊಲೀಸರು (Vijayapura Police) ಯಶಸ್ವಿಯಾಗಿದ್ದಾರೆ.
ಒಂದು ವರ್ಷದ ಹಿಂದೆ ನಡೆದಿದ್ದ ತಾಯಿ ಮಗನ ಡಬಲ್ ಮರ್ಡರ್ ಪ್ರಕರಣ ಬೇಧಿಸಿ, ಕೊಲೆಗೆ ಕಾರಣನಾದ ಆರೋಪಿಯನ್ನ (Accused) ಬಂಧಿಸಿದ್ದಾರೆ. ಇದನ್ನೂ ಓದಿ: ಇಡಿ ಕಸ್ಟಡಿಯಲ್ಲಿದ್ದುಕೊಂಡೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ ಕೇಜ್ರಿವಾಲ್ – ಆದೇಶದಲ್ಲಿ ಏನಿದೆ?
Advertisement
Advertisement
ಏನಿದು ಕೇಸ್?
ಮೈಸೂರು (Mysuru) ಮೂಲದ ಶೃತಿ ಹಾಗೂ ಆಕೆಯ 13 ವರ್ಷದ ಮಗ ರೋಹನ್ ಒಂದು ವರ್ಷದ ಹಿಂದೆ ಹತ್ಯೆಯಾಗಿದ್ದರು. 2023ರ ಮಾರ್ಚ್ 13 ರಂದು ಕೊಲೆ ನಡೆದಿತ್ತು. ವಿಜಯಪುರದ ಸಾಗರ್ ನಾಯಕ್ ಎಂಬಾತನಿಂದ ಕೊಲೆ ನಡೆದಿತ್ತು. ಸಾಗರ್ ಇಬ್ಬರನ್ನೂ ಕ್ರೂರವಾಗಿ ಕೊಂದು ಎರಡೂ ಶವಗಳನ್ನ ಆಕೆಯದ್ದೇ ಲಗೇಜ್ ಬ್ಯಾಗ್‌ನಲ್ಲಿ ತುಂಬಿ ಮಹಾರಾಷ್ಟ್ರ ಗಡಿಯ ಸಿದ್ದಾಪುರ ಗ್ರಾಮದ ಹೊರವಲಯದ ಬಾವಿಗೆ ಬಿಸಾಡಿದ್ದ. ಇದನ್ನೂ ಓದಿ: ಸೋನು ಕಾನೂನುಬಾಹಿರ ದತ್ತು ಪ್ರಕರಣ- ಪೊಲೀಸರಿಂದ ಸ್ಥಳ ಮಹಜರು
Advertisement
Advertisement
ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಗೆಳತಿ:
ಕೊಲೆ ಆರೋಪಿ ಸಾಗರ್ ಮೈಸೂರಿನಲ್ಲಿದ್ದಾಗ ಫೇಸ್‌ಬುಕ್ ಮೂಲಕ ಶೃತಿಯ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು, 13 ವರ್ಷದ ಮಗ ಇರೋ ಆಂಟಿ ಬಲೆಗೆ ಬಿದ್ದಿದ್ದ ಸಾಗರ್. ಬಳಿಕ ಆಕೆಯ ನಡತೆ ಮೇಲೆ ಸಂಶಯಗೊಂಡು ಆಕೆಯನ್ನ ಬಿಟ್ಟು ವಿಜಯಪುರಕ್ಕೆ ಬಂದಿದ್ದ. ಶೃತಿ ಸಹ ಸಾಗರ್‌ನನ್ನ ಹುಡುಕಿಕೊಂಡು 2023ರ ಮಾರ್ಚ್ 13 ರಂದು ಮಗ ರೋಹಿತ್‌ನೊಂದಿಗೆ ಲಗೇಜ್ ಸಮೇತ ವಿಜಯಪುರಕ್ಕೆ ಬಂದಿದ್ದಳು. ಆಗ ನಗರದ ಸಿಂದಗಿ ರಸ್ತೆಯ ಫೋರ್‌ವೇ ಲಾಡ್ಜ್ವೊಂದರಲ್ಲಿ ಶೃತಿ ಹಾಗೂ ಆಕೆಯ ಮಗನನ್ನ ಸಾಗರ್ ಉಳಿಸಿದ್ದ. ನಂತರ ಲಾಡ್ಜ್‌ನಲ್ಲಿ ಗಲಾಟೆಯಾಗಿ ಅಲ್ಲೇ ಶೃತಿಯನ್ನ ಕುತ್ತಿಗೆ ಹಿಸುಕಿ ಕೊಂದು ಹಾಕಿದ್ದ.
ಕೊಲೆಗೆ ಬಾಲಕ ಸಾಕ್ಷಿಯಾಗುತ್ತಾನೆ ಅಂತಾ ರೋಹಿತ್‌ನನ್ನೂ ಕೊಲೆ ಮಾಡಿದ್ದ. ನಂತರ ಶೃತಿ ಮೈಸೂರಿನಿಂದ ತಂದಿದ್ದ ಲಗೇಜ್ ಬ್ಯಾಗ್ ನಲ್ಲಿಯೇ ಅವರ ಶವಗಳನ್ನ ಪ್ಯಾಕ್ ಮಾಡಿ ಸಿದ್ದಾಪುರ ಬಾವಿಯಲ್ಲಿ ಬಿಸಾಡಿದ್ದ. ಇದಾದ ಒಂದು ವಾರದ ಬಳಿಕ ಬ್ಯಾಗ್‌ಗಳು ಮೇಲಕ್ಕೆ ತೇಲಿ ಬಂದಿದ್ದವು. ಈ ಬ್ಯಾಗ್‌ಗಳನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ತಾಯಿ-ಮಗನ ಶವ ಪತ್ತೆಯಾಗಿತ್ತು. ಶವಗಳು ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಗುರುತು ಪತ್ತೆಯಾಗಿರಲಿಲ್ಲ. ಸಣ್ಣ ಸುಳಿವೂ ಇಲ್ಲದೇ ಪ್ರಕರಣ ಬಾಕಿ ಉಳಿದಿತ್ತು.
ಕಳೆದ ಫೆಬ್ರವರಿಯಲ್ಲಿ ಶೃತಿ ಸಂಬಂಧಿಕರು ಮೈಸೂರಿನಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಮೈಸೂರಿನ ಮಿಸ್ಸಿಂಗ್ ಕೇಸ್ ಹಾಗೂ ವಿಜಯಪುರದ ಡಬಲ್ ಮರ್ಡರ್ ಕೇಸ್‌ನಲ್ಲಿ ಸಿಕ್ಕ ವಸ್ತುಗಳಿಗೆ ಸಾಮ್ಯತೆ ಕಂಡುಬಂದಿತ್ತು. ಬಳಿಕ ಪ್ರಕರಣ ಕೈಗೆತ್ತಿಕೊಂಡ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಆರೋಪಿ ಸಾಗರ್‌ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಾವೇರಿ ನೀರಿನಲ್ಲಿ ಕಾರು ವಾಶ್: ಮಾಲೀಕರಿಗೆ 5 ಸಾವಿರ ದಂಡ ವಿಧಿಸಿದ ಜಲಮಂಡಳಿ