ದಿನದಿಂದ ದಿನಕ್ಕೆ ಕಾಫಿನಾಡು ಚಂದು ಜನಪ್ರಿಯತೆ ಹೆಚ್ಚಾಗುತ್ತಿದೆ. ನಾನು ಪುನೀತ್ ಅಣ್ಣ, ಶಿವಣ್ಣನ ಅಭಿಮಾನಿ ಎಂದು ಹೇಳುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಚಂದು ಟ್ರೆಂಡ್ ಸೆಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ತಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ ಅವರನ್ನು ಭೇಟಿ ಮಾಡಿ ಖುಷಿಯಲ್ಲಿದ್ದರು. ಆ ಖುಷಿ ತುಂಬಾ ದಿನ ಉಳಿದಿಲ್ಲ.
Advertisement
ಕಾಫಿನಾಡು ಚಂದು ಕೇವಲ ಬರ್ತಡೇ ಸಾಂಗ್ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿಲ್ಲ. ಅವರ ವೃತ್ತಿ ಆಟೋ ಓಡಿಸುವುದು. ನಿತ್ಯವೂ ಬರೀ ಹಾಡುಗಳನ್ನೇ ಹಾಡುತ್ತಾ ಕೂತರೆ ಹೊಟ್ಟೆ ತುಂಬಬೇಕಲ್ಲ. ಹಾಗಾಗಿ ಇಂತಿಷ್ಟು ವೇಳೆಯನ್ನು ಅವರು ಆಟೋ ಓಡಿಸುವುದಕ್ಕಾಗಿ ಮೀಸಲಿಟ್ಟಿದ್ದಾರೆ. ಈಗ ಅದೇ ಅವರ ನಿಂದನೆಗೆ ಕಾರಣವಾಗಿದೆ. ಆಟೋ ಓಡಿಸುವ ವೇಳೆ ಅಹಿತಕರ ಘಟನೆಯೊಂದು ನಡೆದಿದ್ದು, ಅದೂ ಚಂದು ಅವರ ತವರೂರಿನಲ್ಲೇ ಎನ್ನುವುದು ವಿಷಾದನೀಯ. ಇದನ್ನೂ ಓದಿ:ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್
Advertisement
Advertisement
ಚಂದು ಆಟೋ ಓಡಿಸುತ್ತಿದ್ದಾಗ ವ್ಯಕ್ತಿಯೊಬ್ಬ ಹಾಡೊಂದನ್ನು ಮಾಡಿಕೊಡುವಂತೆ ಕೇಳುತ್ತಾರೆ. ಅದಕ್ಕೆ ಚಂದು ಒಪ್ಪುವದಿಲ್ಲ. ನಾನೀಗ ಆಟೋ ಓಡಿಸುತ್ತಿದ್ದೇನೆ. ಸಂಜೆ ನಂತರ ಬನ್ನಿ ಮಾಡಿಕೊಡುವೆ ಎಂದು ಕೇಳಿಕೊಳ್ಳುತ್ತಾರೆ. ಆದರೆ, ಆ ವ್ಯಕ್ತಿ ಅದನ್ನು ಒಪ್ಪುವುದಿಲ್ಲ. ಈಗಲೇ ಮಾಡಿಕೊಡುವಂತೆ ಒತ್ತಡ ಹಾಕುತ್ತಾರೆ. ಅದಕ್ಕೆ ಜಗ್ಗದ ಚಂದು ಅಲ್ಲಿಂದ ಹೊರಡಲು ಯತ್ನಿಸುತ್ತಾರೆ. ಆಗ ಆ ವ್ಯಕ್ತಿಯು ‘ನೀನು ಇದೀಗ ಬದುಕ್ತಿರೋದೇ ನಮ್ಮಂಥವರಿಂದ. ಹೋಗಲೋ ಎಂದು ನಿಂದಿಸುತ್ತಾರೆ. ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.