ಕಾಫಿನಾಡು ಚಂದು ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದ್ದಕ್ಕೆ ಫ್ಯಾನ್ಸ್ ಬೇಸರ

Public TV
1 Min Read
coffenadu chandu

ಸೋಷಿಯಲ್ ಮೀಡಿಯಾದಲ್ಲಿ ಬರ್ತ್‌ಡೇ ವಿಶ್ ಹೇಳುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಕಲಾವಿದ ಕಾಫಿನಾಡು ಚಂದು(Coffenadu Chandu) ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದೆ. ಕಷ್ಟಪಟ್ಟು ಬೆಳೆದ ಹಳ್ಳಿ ಪ್ರತಿಭೆ ಕಾಫಿನಾಡು ಚಂದುಗೆ ಸಂಕಷ್ಟವೊಂದು ಎದುರಾಗಿದೆ. ಅವರ  ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ.

coffenadu chandu

ನಾನು ಶಿವಣ್ಣ (Shivarajkumar) ಪುನೀತ್ ಅಣ್ಣರ (Puneeth Rajkumar) ಅಭಿಮಾನಿ ಎಂದು ವೀಡಿಯೋ ಶುರು ಮಾಡುತ್ತಿದ್ದ ಚಂದು ಅವರ ಇನ್ಸ್ಟಾಗ್ರಾಂ ಅಕೌಂಟ್ ಕಾಣೆಯಾಗಿದೆ. ಬರ್ತ್‌ಡೇ ವಿಶ್ ಮಾಡುವ ಮೂಲಕ 4 ಲಕ್ಷಕ್ಕೂ ಅಧಿಕ ಫ್ಯಾನ್ಸ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹೊಂದಿದ್ದರು. ಈಗ ಹಳ್ಳಿ ಪ್ರತಿಭೆಯ ಚಂದು ಖಾತೆಯ ಮೇಲೆ ಹ್ಯಾಕರ್ಸ್ ಕಣ್ಣು ಬಿದ್ದಿದೆ. ಅವರ ಅಕೌಂಟ್ ಹ್ಯಾಕ್ ಮಾಡಲಾಗಿದೆ. ಇದನ್ನೂ ಓದಿ:`ಐರಾವತ’ ನಟಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಪಾಕಿಸ್ತಾನಿ ಬೌಲರ್ ನಸೀಮ್ ಶಾ

coffenadu chandu 1 1

ಇತ್ತೀಚೆಗಷ್ಟೇ ಶಿವಣ್ಣ ಮತ್ತು ನಿರೂಪಕಿ ಅನುಶ್ರೀ ಅವರನ್ನ ಚಂದು ಭೇಟಿಯಾಗಿ ಬಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕಾಫಿನಾಡು ಚಂದು ಸದಾ ಸಕ್ರಿಯರಾಗಿದ್ದರು. ಇದೀಗ ಅವರ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದ್ದಕ್ಕೆ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article