ಸಾಮಾನ್ಯವಾಗಿ ಭಾನುವಾರ ಬಂದ್ರೆ ಮಕ್ಕಳೆಲ್ಲಾ ಮನೆಯಲ್ಲಿರುತ್ತಾರೆ. ಗೃಹಿಣಿಯರು ಮಕ್ಕಳಿಗೆ ಸ್ಪೆಷಲ್ ತಿಂಡಿ ಮಾಡೋದಕ್ಕೆ ಪ್ಲಾನ್ ಮಾಡಿಕೊಂಡಿರುತ್ತಾರೆ. ಪ್ರತಿದಿನ ಉಪ್ಪಿಟ್ಟು, ಅವಲಕ್ಕಿ, ರೈಸ್‍ಬಾತ್ ಅಂತ ತಿಂದು ಬೇಜಾರು ಆಗಿರುತ್ತಾರೆ. ಸಂಡೇಗಾಗಿ ಬಹುತೇಕರ ಮನೆಯಲ್ಲಿ ದೋಸೆ ಪರಿಮಳ ಹರಿದಾಡುತ್ತಿರುತ್ತದೆ. ದೋಸೆ ಮಾಡಿದ್ರೆ ಜೊತೆಗೆ ಯಾವ ಚಟ್ನಿ ಮಾಡೋದು ಅನ್ನೋದು ದೊಡ್ಡ ಪ್ರಶ್ನೆಯಾಗಿರುತ್ತದೆ. ಹಾಗಾಗಿ ಫಟಾಫಟ್ ಚಟ್ನಿ ಮಾಡುವ ಸುಲಭ ರೆಸಿಪಿ ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು
* ಕಾಯಿ ತುರಿ- ಅಗತ್ಯಕ್ಕನುಸಾರ (ಚಟ್ನಿಗೆ ಇದೇ ಮುಖ್ಯ ಪದಾರ್ಥ)
* ಶುಂಠಿ- ಸ್ವಲ್ಪ
* ಹಸಿ ಮೆಣಸಿನಕಾಯಿ- ಖಾರಕ್ಕೆ ಬೇಕಾದಷ್ಟು
* ಹುಣಸೆಹಣ್ಣು- ಸ್ವಲ್ಪ
* ಉಪ್ಪು- ರುಚಿಗೆ ತಕ್ಕಷ್ಟು
* ಎಣ್ಣೆ- ಒಗ್ಗರಣೆಗೆ
Advertisement
Advertisement
ಮಾಡುವ ವಿಧಾನ
* ಜಾರ್ ಗೆ ಕಾಯಿ ತುರಿ, ಶುಂಠಿ, ಹಸಿಮೆಣಸಿನಕಾಯಿ, ಹುಣಸೆಹಣ್ಣು, ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
* ತೀರ ಗಟ್ಟಿ ಅನ್ನಿಸಿದರೆ ನೀರು ಸೇರಿಸಿ ತೆಳ್ಳಗೆ ಮಾಡಿಕೊಳ್ಳಿ.
* ಈಗ ಒಗ್ಗರಣೆಗೆ ಎಣ್ಣೆ ಕಾಯಿಸಿ. ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಹಾಕಿ
* ಚಟ್ನಿಗೆ ಒಗ್ಗರಣೆ ಮಿಶ್ರಣ ಮಾಡಿ. ಈಗ ರುಚಿ ರುಚಿಯಾದ ಚಟ್ನಿ ರೆಡಿ.
Advertisement
ಹೀಗೆ ರೆಡಿಯಾದ ಚಟ್ನಿಯನ್ನು ಕೇವಲ ದೋಸೆಗೆ ಮಾತ್ರವಲ್ಲದೇ ಇಡ್ಲಿ, ಚಪಾತಿ, ಪೂರಿ, ರೊಟ್ಟಿ ಮತ್ತು ಬಿಸಿ ಬಿಸಿಯಾದ ಅನ್ನದ ಜೊತೆಗೆ ತಿನ್ನಬಹುದು.