ಕೋಲ್ಕತ್ತಾ: ಸ್ಯಾನ್‌ಫ್ರ್ಯಾನ್ಸಿಸ್ಕೋದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದರಲ್ಲಿ ಜಿರಳೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಏರ್‌ಇಂಡಿಯಾ (Air India)ವಿಮಾನಯಾನ ಸಂಸ್ಥೆ ಪ್ರತಿಕಾ ಹೇಳಿಕೆ ಬಿಡುಗಡೆಗೊಳಿಸಿ, ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ.
ಸೋಮವಾರ (ಆ.4) ಸ್ಯಾನ್‌ಫ್ರ್ಯಾನ್ಸಿಸ್ಕೋದಿಂದ ಮುಂಬೈಗೆ ಹೊರಟಿದ್ದ ಏರ್‌ಇಂಡಿಯಾ AI180 ವಿಮಾನ ಇಂಧನ ಭರ್ತಿಗಾಗಿ ಕೋಲ್ಕತ್ತಾದಲ್ಲಿ ನಿಲುಗಡೆಯಾಗಿತ್ತು. ಈ ವೇಳೆ ಇಬ್ಬರು ಪ್ರಯಾಣಿಕರು ಕುಳಿತಿದ್ದ ಆಸನದ ಕೆಳಗೆ ಜಿರಳೆ ಕಾಣಿಸಿಕೊಂಡಿದೆ. ಈ ಕುರಿತು ಪ್ರಯಾಣಿಕರು ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಬಳಿಕ ಪ್ರಯಾಣಿಕರನ್ನು ಅದೇ ಕ್ಯಾಬಿನ್‌ನ ಇನ್ನೊಂದು ಆಸನಕ್ಕೆ ಬದಲಾಯಿಸಿದರು.ಇದನ್ನೂ ಓದಿ:ಗ್ರಾ.ಪಂ ಸದಸ್ಯನ ಕಿಡ್ನ್ಯಾಪ್‌ಗೆ ಯತ್ನಿಸಿ ವಿಫಲ – ಚಾಕು ಇರಿದು ದುಷ್ಕರ್ಮಿಗಳು ಎಸ್ಕೇಪ್
ಈ ಕುರಿತು ಏರ್‌ಇಂಡಿಯಾ ಸಂಸ್ಥೆ ಪ್ರತಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದು, ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದು, ಈ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ. ಪ್ರಯಾಣಿಕರಿಗೆ ಜಿರಳೆಯಿಂದ ಸಮಸ್ಯೆಯಾದಾಗ ನೆಲವನ್ನು ಶುಚಿಗೊಳಿಸಲಾಯಿತು. ಅಲ್ಲಿಂದ ವಿಮಾನ ಸರಿಯಾದ ಸಮಯಕ್ಕೆ ಮುಂಬೈ ತಲುಪಿದೆ. ನಾವು ನಿರಂತರವಾಗಿ ವಿಮಾನವನ್ನು ಸ್ವಚ್ಛವಾಗಿಟ್ಟರೂ ಕೂಡ ಕೆಲವೊಮ್ಮೆ ಕೀಟಗಳು ವಿಮಾನವನ್ನು ಪ್ರವೇಶಿಸುತ್ತವೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಏರ್ ಇಂಡಿಯಾ ತಿಳಿಸಿದೆ.
ಜೂ.12ರಂದು ಸಂಭವಿಸಿದ್ದ ಏರ್‌ಇಂಡಿಯಾ ದುರಂತದ ಬಳಿಕ ಸಂಸ್ಥೆಯು ತಾಂತ್ರಿಕ ದೋಷ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕೂ ಮುನ್ನ ದೆಹಲಿಯಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ತೆಗೆದುಕೊಂಡಿದ್ದ ಆಮ್ಲೆಟ್‌ನಲ್ಲಿ ಜಿರಳೆ ಕಾಣಿಸಿಕೊಂಡಿದ್ದಾಗಿ ವರದಿಯಾಗಿತ್ತು.ಇದನ್ನೂ ಓದಿ: ಸಿರಾಜ್, ಕೃಷ್ಣ ಮ್ಯಾಜಿಕ್ – ಭಾರತಕ್ಕೆ ರೋಚಕ 6 ರನ್‌ಗಳ ಜಯ