ಕಳೆದ ವಾರ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಸ್ಪರ್ಧಿ ಕಾಕ್ರೋಚ್ ಸುಧಿ (Cockroach Sudhi) ಇದೀಗ ರಕ್ಷಿತಾ (Rakshita) ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಸೀಸನ್ ಕನ್ನಡ ಬಿಗ್‌ಬಾಸ್‌ನಲ್ಲಿ (Bigg Boss Kannada) ಮಹಿಳಾ ಸ್ಪರ್ಧಿಗಳೇ ಗೆಲ್ಲೋದಾದ್ರೆ ರಕ್ಷಿತಾ ಗೆಲ್ಲಲಿ, ಅವರೂ ಚೆನ್ನಾಗಿ ಆಟ ಆಡುತ್ತಿದ್ದಾರೆ. ಸ್ಟ್ರಾಂಗ್ ಆಗಿದ್ದಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿದ್ದಾಗ ಕಾಕ್ರೋಚ್ ಸುಧಿಗೆ ಸ್ಪರ್ಧಿ ಅಶ್ವಿನಿ ಗೌಡ ಹಾಗೂ ಜಾನ್ವಿ ಜೊತೆ ಸ್ನೇಹವಿತ್ತು. ಅವರ ಪರವಾಗೇ ಮಾತನಾಡುತ್ತಿದ್ದರು. ರಕ್ಷಿತಾ ಶೆಟ್ಟಿಯನ್ನ ವಿರೋಧಿಸುತ್ತಿದ್ದ ಸುಧಿ ಆಕೆಗೆ *** ಕೆಟ್ಟ ಪದವನ್ನೂ ಬಳಸಿ ನಿಂದಿಸಿದ್ದರು. ಬಳಿಕ ರಕ್ಷಿತಾ ಮಾತನಾಡುವ ಶೈಲಿ ಫೇಕ್ ಆಗಿದ್ದಾಗಿದೆ ಎಂದು ಸುದೀಪ್ ಮುಂದೆ ಹೇಳಿದ್ದರು. ಇದೀಗ ಮನೆಯಿಂದ ಹೊರ ಬಂದ ಬಳಿಕ ರಕ್ಷಿತಾ ಮೇಲೆ ಅಭಿಪ್ರಾಯ ಬದಲಾಗಿದ್ದು ಈ ಸೀಸನ್‌ನಲ್ಲಿ ರಕ್ಷಿತಾ ಗೆಲ್ಲಲಿ. ಆಕೆಯೂ ಸಾಧನೆ ಮಾಡಿಯೇ ಮನೆ ಒಳಗೆ ಹೋಗಿದ್ದಾರೆ ಅನ್ನೋದನ್ನ ಮನೆಯಿಂದ ಹೊರ ಬಂದ ಬಳಿಕ ತಿಳಿದುಕೊಂಡೆ. ತುಂಬಾ ಮೆಡಲ್‌ಗಳನ್ನ ರಕ್ಷಿತಾ ಗೆದ್ದಿದ್ದಾರೆ ಅಂತ ನನ್ನ ಹೆಂಡತಿ ಹೇಳಿದ್ರು. ರಕ್ಷಿತಾ ಚೆನ್ನಾಗಿ ಆಟವಾಡುತ್ತಿದ್ದಾರೆ. ಅವರೇ ಗೆಲ್ಲಲಿ ಬಿಡಿ ಎಂದು ʻಪಬ್ಲಿಕ್ ಟಿವಿʼಯ ಸಂದರ್ಶನದಲ್ಲಿ ಮಾತನಾಡಿದ್ದಾರೆ.ಇದನ್ನೂ ಓದಿ: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಮಹಾತಿರುವು: ನಟಿ ಮೇಘಾಶ್ರೀ ಎಂಟ್ರಿ
ಬಿಗ್‌ಹೌಸ್‌ನಲ್ಲಿದ್ದಾಗ ರಕ್ಷಿತಾಳನ್ನು ದ್ವೇಷಿಸುತ್ತಿದ್ದ ಸುಧಿ. ಮನೆಯಿಂದ ಹೊರಬಂದ ಬಳಿಕ ಅಭಿಪ್ರಾಯ ಬದಲಿಸಿಕೊಂಡಿದ್ದು ವಿಶೇಷ. ಈ ಬಾರಿ ಯಾರು ಬಿಗ್‌ಬಾಸ್ ಕಪ್ ತಮ್ಮದಾಗಿಸಿಕೊಳ್ಳಬಹುದು ಎಂಬ ಪ್ರಶ್ನೆಗೆ ಸುಧಿ ರಕ್ಷಿತಾ ಗೆದ್ದರೂ ಆಶ್ಚರ್ಯವಿಲ್ಲ. ಗೆಲ್ಲೋ ಅರ್ಹತೆ ರಕ್ಷಿತಾಗಿದೆ ಎಂಬರ್ಥದಲ್ಲಿ ಉತ್ತರಿಸಿದ್ದಾರೆ.

