ಗದಗ: ಹಣ ಕೊಟ್ಟು ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಬಾಟಲಿ ಖರೀದಿ ಮಾಡಿ ನೀರು ಕುಡಿಯುವ ಮುನ್ನ ಗ್ರಾಹಕರು ಎಚ್ಚರ ವಹಿಸಬೇಕು. ಇಲ್ಲವಾದ್ರೆ ನೀರಿನಿಂದ ನಿಮ್ಮ ಜೀವಕ್ಕೆ ಆಪತ್ತು ಬರಬಹುದು.
ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಹೋಟೆಲ್‍ವೊಂದರಲ್ಲಿ “ಅಕ್ವಾ ಕಿಂಗ್” ಎಂಬ ಹೆಸರಿನ ನೀರಿನ ಬಾಟಲಿಯಲ್ಲಿ ಜಿರಳೆ ಪತ್ತೆಯಾಗಿದೆ. ಇದು 2 ಲೀಟರ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಬಾಟಲ್ ಆಗಿದ್ದು, ದೊಡ್ಡದಾದ ಜಿರಳೆ ಬಾಟಲಿನ ಓಳಗೆ ಕಂಡು ಬಂದಿದೆ. ಇದರಿಂದ ಜಿಲ್ಲೆಯ ಜನರು ಭಯಗೊಂಡಿದ್ದಾರೆ.
Advertisement
Advertisement
ಗ್ರಾಹಕರು ನೋಡದೇ ಅಪ್ಪಿ-ತಪ್ಪಿ ನೀರು ಕುಡಿದಿದ್ದರೆ ಆಸ್ಪತ್ರೆ ಸೇರಬೇಕಿತ್ತು. ಆದ್ದರಿಂದ ನೀರಿನ ಬಾಟಲ್ ಖರೀದಿಸಿ ನೀರು ಕುಡಿಯುವ ಮೊದಲು ಒಮ್ಮೆ ನೋಡಿ ಕುಡಿಯೋದು ಒಳಿತು.
Advertisement
ಈ ಅಕ್ವಾ ಕಿಂಗ್ ಬಾಟಲ್ ಗಳು ಕೊಪ್ಪಳ ನಗರದ ತಾವರಗೇರಿ ರಸ್ತೆಯಲ್ಲಿನ ಶುದ್ಧ ನೀರಿನ ಘಟಕದಲ್ಲಿ ತಯಾರಾಗುತ್ತವೆ. ಅಲ್ಲಿಂದ ವಿವಿಧ ಜಿಲ್ಲೆಗಳಿಗೂ ಪೂರೈಕೆ ಆಗುತ್ತವೆ.