ರಾಯಚೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆ ಜಿಲ್ಲೆಯ ಸಿಂಧನೂರಿನಲ್ಲಿ ಕೋಳಿ ಪಂದ್ಯಗಳ ಜೂಜಾಟ ಜೋರಾಗಿ ನಡೆದಿದೆ.
ಸಿಂಧನೂರು ತಾಲೂಕಿನ ಗಾಂಧಿನಗರದಲ್ಲಿ ರಾಜಾರೋಷವಾಗಿ ಕೋಳಿ ಪಂದ್ಯಗಳನ್ನು ನಡೆಸುತ್ತಿದ್ದು, ಲಕ್ಷಾಂತರ ರೂಪಾಯಿ ಜೂಜಾಟ ನಡೆದಿದೆ. ಹುಂಜಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಪಂದ್ಯವನ್ನು ನಡೆಸಲಾಗುತ್ತದೆ. ಹುಂಜಗಳ ಮೇಲೆ ಜನ ಸಾವಿರಾರು ರೂಪಾಯಿ ಜೂಜು ಕಟ್ಟಿ ಆಡುತ್ತಿದ್ದಾರೆ.
Advertisement
Advertisement
ಪಂದ್ಯಾವಳಿಗಾಗಿಯೇ ಹುಂಜಗಳನ್ನು ಬಲಿಷ್ಠವಾಗಿ ಬೆಳೆಸಿ ತರಲಾಗುತ್ತದೆ. ಕೋಳಿ ಪಂದ್ಯ ನಿಷೇಧವಿದ್ದರೂ ಶಾಮಿಯಾನ ಕಟ್ಟಿಕೊಂಡು ಪಂದ್ಯ ನಡೆಸುತ್ತಿದ್ದಾರೆ. ಗಾಂಧಿನಗರದ ಸುತ್ತಮುತ್ತಲ ಗ್ರಾಮದ ಜನ ಮಾತ್ರವಲ್ಲದೆ ಸಿಂಧನೂರು ಸೇರಿ ಬೇರೆಡೆಯಿಂದಲೂ ಜನ ಜೂಜಾಡಲು ಬರುತ್ತಿದ್ದಾರೆ. ಸಿಂಧನೂರಿನ ತುರವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋಳಿ ಪಂದ್ಯ ನಡೆಯುತ್ತಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv