ನವದೆಹಲಿ: ಕೋಕಾ ಕೋಲಾ ಪಾನಿಯ ಕಂಪೆನಿ ಸ್ಥಾಪಕ ಮೊದಲು ನಿಂಬೆ ಹಣ್ಣಿನ ಜ್ಯೂಸ್ ಮಾರಾಟ ಮಾಡುತ್ತಿದ್ದರು ಎಂದು ಹೇಳಿಕೆ ನೀಡಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.
ನವದೆಹಲಿಯಲ್ಲಿ ಸೋಮವಾರ ಪಕ್ಷ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋಕಾ ಕೋಲಾ ಕಂಪೆನಿಯನ್ನು ಆರಂಭಿಸಿದವರು ಯಾರು ಗೊತ್ತೆ? ನಾನು ಹೇಳುತ್ತೇನೆ ಕೇಳಿ. ಈ ಕಂಪೆನಿಯನ್ನು ಅಮೆರಿಕದ ನಿಂಬೆ ಹಣ್ಣಿನ ಜ್ಯೂಸ್ ಮಾಡೋ ವ್ಯಕ್ತಿ ಸ್ಥಾಪನೆ ಮಾಡಿದ್ದು, ಈ ವ್ಯಕ್ತಿಯ ಕೌಶಲ್ಯವನ್ನು ಗುರುತಿಸಿ ಹೆಚ್ಚಿನ ಆದ್ಯತೆ ನೀಡಲಾಯಿತು ಎಂದು ತಿಳಿಸಿದರು.
Advertisement
https://twitter.com/SirJadejaaaa/status/1006172865299959808
Advertisement
ಇದಾದ ಬಳಿಕ ಮ್ಯಾಕ್ ಡೊನಾಲ್ಡ್ ಕಂಪೆನಿ ಯಾರು ಸ್ಥಾಪನೆ ಮಾಡಿದ್ದು ಎಂದು ಸಹ ಪ್ರಶ್ನೆ ಮಾಡಿದ್ದು, ಈ ಕಂಪೆನಿ ಭಾರತದಲ್ಲಿ ಎಲ್ಲೆಡೆ ಕಾಣಸಿಗುತ್ತದೆ. ಒಬ್ಬರು ಡಾಬಾ ನಡೆಸುವ ವ್ಯಕ್ತಿ ಈ ಕಂಪೆನಿಯನ್ನು ಸ್ಥಾಪಿಸಿ ಈಗ ತಮ್ಮದೇ ಬ್ರಾಂಡ್ ಸೃಷ್ಟಿ ಮಾಡಿದ್ದಾರೆ. ಆದರೆ ಭಾರತದಲ್ಲಿ ಇಂತಹ ಒಬ್ಬ ವ್ಯಕ್ತಿಯನ್ನು ನೋಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
Advertisement
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಅವರು, ಮೋದಿ ಕೇವಲ ಉದ್ಯಮಿಗಳಿಗೆ ಮಾತ್ರ ಸಹಾಯ ಮಾಡುತ್ತಾರೆ. ಭಾರತೀಯ ಯುವಕರಲ್ಲಿ ಸಾಧನೆ ಮಾಡುವ ಶಕ್ತಿ, ಜ್ಞಾನ, ಸಾಮರ್ಥ್ಯವಿದ್ದರೂ ಸಹ ಬ್ಯಾಂಕ್ ಗಳು ಸಾಲ ನೀಡುವುದಿಲ್ಲ ಎಂದು ಆರೋಪಿಸಿದ್ದಾರೆ. ಆದರೆ ರಾಹುಲ್ ಅವರು ಮೋದಿ ಅವರ ನಡೆಯನ್ನು ಟೀಕಿಸಲು ವಿದೇಶಿ ಸಂಸ್ಥೆಗಳ ಉದಾಹರಣೆ ನೀಡುವಾಗ ಎಡವಟ್ಟು ಮಾಡಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಈಗ ಟ್ರೋಲ್ ಆಗುತ್ತಿದ್ದಾರೆ.
Advertisement
https://twitter.com/iamsubrata7/status/1006144359413080064?
ಮೆಕ್‍ಡೊನಾಲ್ಡ್ಸ್ 1940 ರಲ್ಲಿ ರಿಚಾಡ್ಸ್ ಮತ್ತು ಮೌರಿಸ್ ಮ್ಯಾಕ್ ಡೊನಾಲ್ಡ್ ಎಂಬವರು ಜಂಟಿಯಾಗಿ ಕಂಪೆನಿಯನ್ನು ಸ್ಥಾಪನೆ ಮಾಡಿದ್ದರು. ಇದಕ್ಕೂ ಮುನ್ನ 1937 ರಲ್ಲಿ ಹಾಟ್ ಡಾಗ್ ಸ್ಟ್ಯಾಂಡ್ ಎಂದು ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪನೆ ಮಾಡಿದ್ದರು. ಸದ್ಯ ಈ ಸಂಸ್ಥೆ ಇಂದು ವಿಶ್ವದ ನೂರು ದೇಶಗಳಲ್ಲಿ ತನ್ನ ಕೇಂದ್ರಗಳನ್ನು ಸ್ಥಾಪಿಸಿದೆ. ಉಳಿದಂತೆ ಕೋಕಾ ಕೋಲಾ ಕಂಪೆನಿಯನ್ನು 1886 ರಲ್ಲಿ ಅಮೆರಿಕಾದ ಜಾನ್ ಪೆಂಬರ್ಟನ್ ಸ್ಥಾಪನೆ ಮಾಡಿದ್ದು, ಸೋಡಾ ಬಳಸಿ ಪಾನೀಯವನ್ನು ತಯಾರು ಮಾಡಿದ್ದರು.
ಒಟ್ಟಾರೆ ಪ್ರಧಾನಿ ಮೋದಿ ಅವರು ದೇಶದ 15 ರಿಂದ 20 ರಷ್ಟಿರುವ ಉದ್ಯಮಿಗಳಿಗೆ ಮಾತ್ರ ಸಹಾಯ ಮಾಡುತ್ತಾರೆ ಎಂದು ಆರೋಪಿಸಲು ಹೋಗಿ ರಾಹುಲ್ ಗಾಂಧಿ ಎಡವಟ್ಟು ಮಾಡಿಕೊಂಡಿದ್ದಾರೆ. ರಾಹುಲ್ ಅವರ ಹೇಳಿಕೆ ಸರಿ ಎಂದು ಸಾಕ್ಷಿ ಸಮೇತ ನೀಡಲು ಕಾಂಗ್ರೆಸ್ ಐಟಿ ಸೆಲ್ ಸದಸ್ಯರೊಬ್ಬರು ವಿಕಿಪೀಡಿಯಾದಲ್ಲಿ ಕೋಕಾಕೋಲಾ ಸ್ಥಾಪಕರು ನಿಂಬೂ ಜ್ಯೂಸ್ ಮಾರಾಟ ಮಾಡುತ್ತಿದ್ದರು ಎಂದು ಎಡಿಟ್ ಮಾಡಿ ಸಿಕ್ಕಿಬಿದ್ದಿದ್ದಾರೆ. ವಿಕಿಪೀಡಿಯಾದಲ್ಲಿ ಅಪ್ ಡೇಟ್ ಆಗಿರುವ ವಿಚಾರವನ್ನು ಯಾರೇ ಎಡಿಟ್ ಮಾಡಿದ್ದರೂ ಅದು ಎಲ್ಲ ಸದಸ್ಯರಿಗೆ ತಿಳಿಯುತ್ತದೆ. ರಾಹುಲ್ ಭಾಷಣದ ಬಳಿಕ ಈ ಅಂಶವನ್ನು ಸೇರಿಸಿದ್ದಕ್ಕೆ ಕಾಂಗ್ರೆಸ್ ಐಟಿ ಸೆಲ್ ಮತ್ತು ರಾಹುಲ್ ಗಾಂಧಿ ವಿರುದ್ಧ ಫೋಟೋ ಸಮೇತ #AccordingToRahulGandhi ಎಂಬ ಟ್ಯಾಗ್ ಬಳಸಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದು, ಸದ್ಯಕ್ಕೆ ದೇಶದಲ್ಲಿ ಈ ಹ್ಯಾಶ್ ಟ್ಯಾಗ್ ನಂಬರ್ ಒನ್ ಟಾಪಿಕ್ ಆಗಿದೆ.
ಈ ಹಿಂದೆ 2013 ರಲ್ಲಿಯೂ ರಾಹುಲ್ ಗಾಂಧಿ ದಲಿತರ ಕುರಿತ ಹೇಳಿಕೆವೊಂದನ್ನು ನೀಡಿ ಸ್ಪಷ್ಟಿಕರಣ ನೀಡಲು ಆಗದೇ ಎಡವಟ್ಟು ಮಾಡಿಕೊಂಡಿದ್ದರು. ಇದನ್ನು ಓದಿ: ಬಿಜೆಪಿ ವಿರುದ್ಧ ಕಿಡಿಕಾರಲು ಹೋಗಿ ಎಡವಟ್ಟು: ಕ್ಷಮೆ ಕೇಳಿದ ದಿಗ್ವಿಜಯ್ ಸಿಂಗ್
https://twitter.com/sharadkumawat_/status/1006141062568542213?
https://twitter.com/Shehzad_Ind/status/1006138337772462080?
https://twitter.com/girishs2/status/1006128599378739206