ಚಿಕ್ಕಮಗಳೂರು: ಒಂದು ಹಾವು ಮತ್ತೊಂದು ಹಾವನ್ನು ನುಂಗೋದು ಸಹಜ. ಆದರೆ ಒಂದು ನಾಗರಹಾವು ಮತ್ತೊಂದು ನಾಗರಹಾವನ್ನು ನುಂಗೋದಿಲ್ಲ. ಒಂದು ವೇಳೆ ನುಂಗಿದರೂ ಅದು ಅಪರೂಪ. ಅಂತಹಾ ಒಂದು ಅಪರೂಪದ ಘಟನೆಗೆ ಕಾಫಿನಾಡು ಚಿಕ್ಕಮಗಳೂರು ಸಾಕ್ಷಿಯಾಗಿದೆ.
ನಗರದ ಹೌಸಿಂಗ್ ಬೋರ್ಡ್‍ನಲ್ಲಿ ನಾಗರ ಹಾವೊಂದು ಮತ್ತೊಂದು ನಾಗರಹಾವನ್ನು ನುಂಗಿ ಸಂಚರಿಸೋಕೆ ಆಗದೆ ಬೇಲಿಯ ಪಕ್ಕದಲ್ಲಿ ನಿಧಾನವಾಗಿ ಒದ್ದಾಡಿಕೊಂಡು ತೆವಳುತ್ತಿತ್ತು. ಕೂಡಲೇ ಸ್ಥಳೀಯರು ಇದನ್ನು ಗಮನಿಸಿದ್ದು, ತಕ್ಷಣ ಸ್ನೇಕ್ ನರೇಶ್ ಎಂಬವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
Advertisement
Advertisement
ವಿಚಾರ ತಿಳಿದ ನರೇಶ್ ಅವರು ಸ್ಥಳಕ್ಕೆ ಬಂದು ಹಾವನ್ನು ನೋಡಿ ರಕ್ಷಣೆ ಮಾಡಿದ್ದಾರೆ. ಆದರೆ ಅದು ಮತ್ತೊಂದು ಹಾವನ್ನು ನುಂಗಿದೆ ಎಂದು ಅವರಿಗೂ ಕೂಡ ಮೊದಲು ತಿಳಿದಿರಲಿಲ್ಲ. ನಂತರ ಹಾವಿನ ಬಾಲವನ್ನು ಹಿಡಿದು ಮೇಲೆತ್ತಿದ ಕೂಡಲೇ ಹೊಟ್ಟೆಯೊಳಗಿದ್ದ ಹಾವನ್ನು ಕಕ್ಕಿ ಹೊರಬೀಳಿಸಿದೆ.
Advertisement
ಹೊಟ್ಟೆ ಒಳಗಿದ್ದ ಹಾವು ಸತ್ತು ಹೋಗಿತ್ತು. ಬದುಕಿರುವ ನಾಗರಹಾವನ್ನು ಸ್ನೇಕ್ ನರೇಶ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
Advertisement