ಚಿಕ್ಕಬಳ್ಳಾಪುರ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿನ ಅಂತರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ.
ಜಿಲ್ಲಾ ಕೇಂದ್ರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಸ್ವಿಮ್ಮಿಂಗ್ ಪೂಲ್‍ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಅದನ್ನು ನೋಡಿದ ಅಧಿಕಾರಿಗಳು ತಕ್ಷಣ ಉರಗರಕ್ಷಕ ಸ್ನೇಕ್ ಪೃಥ್ವಿರಾಜ್ ಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ನಾಗರಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
Advertisement
Advertisement
ಅಂತರಾಷ್ಟ್ರೀಯ ಸ್ವಿಮ್ಮಿಂಗ್ ಸ್ಪರ್ಧೆಗಳ ಆಯೋಜನೆಗಾಗಿ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ 2012 ರಲ್ಲಿ ಈ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದೆ. ಅಂದಹಾಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಈಜುಕೊಳದ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿನ ಅಭಾವವಿದೆ. ಹೀಗಾಗಿ ಇರೋ ಏಕೈಕ ಬೋರ್ ವೆಲ್‍ನಿಂದ ವಸತಿ ನಿಲಯ ಹಾಗೂ ಕಚೇರಿಗಳ ಬಳಕೆಗೆ ನೀರು ಬಳಸಿಕೊಳ್ಳುತ್ತಿದ್ದು, ಈಜುಕೊಳಕ್ಕೆ ನೀರಿನ ಅಭಾವ ಕಾಡುತ್ತಿದೆ.
Advertisement
ಕೇವಲ ಬೇಸಿಗೆಯಲ್ಲಿ ಅಷ್ಟೇ ಸಾರ್ವಜನಿಕರ ಒತ್ತಯದಿಂದ ಈಜುಕೊಳ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಬೇಸಿಗೆಯಲ್ಲಿ ಮಾತ್ರ ಆರಂಭವಾಗುವ ಈ ಈಜುಕೊಳ ಉಳಿದ ದಿನಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿ ಹೋಗುತ್ತಿದೆ. ಈಜುಕೊಳದ ಸುತ್ತಮುತ್ತಲೂ ಗಿಡ ಗಂಟೆಗಳು ಬೆಳೆದು ಹಾವುಗಳ ಆವಾಸ ಸ್ಥಾನವಾಗುತ್ತಿವೆ. ಈ ಹಿಂದೆಯೇ ಪೃಥ್ವಿರಾಜ್ ಎರಡು ಮೂರು ಬಾರಿ ಹಾವುಗಳನ್ನ ಸೆರೆಹಿಡಿದಿದ್ದರು.
Advertisement
ಕ್ರೀಡಾಂಗಣದ ಸುತ್ತಲೂ ಮೊದಲು ಯಾವುದೇ ಮನೆ-ಕಟ್ಟಡಗಳಿರಲಿಲ್ಲ. ಈಗ ಸುತ್ತಲೂ ಕಟ್ಟಡಗಳಾಗಿವೆ. ಹೀಗಾಗಿ ಕ್ರೀಡಾಂಗಣದಲ್ಲಿ ಜನ ಓಡಾಟ ಇರುವ ಕಾರಣ ಹಾವುಗಳು ಜನ ಓಡಾಡದಂತಹ ಹಾಗೂ ಇಲಿ ಸೇರಿದಂತೆ ಆಹಾರ ಸಿಗುವ ಜಾಗಗಳನ್ನ ಹುಡುಕಿಕೊಂಡು ಇಲ್ಲಿ ಸೇರಿಕೊಂಡಿರಬಹದು. ಸದ್ಯ ಮರಳಿ ಈಜುಕೊಳ ಆರಂಭ ಮಾಡಲು ಮುಂದಾಗಿರುವ ಇಲಾಖೆ ಈಗ ಈಜುಕೊಳಕ್ಕೆ ನೀರು ತುಂಬುವ ಕಾಯಕ ಮಾಡುತ್ತಿದೆ. ಕೆಲವು ದಿನಗಳಲ್ಲಿ ಸಾರ್ವಜನಿಕರಿಗೆ ಈಜಾಡಲು ಅವಕಾಶ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.