ಬೆಂಗಳೂರು/ನೆಲಮಂಗಲ: ನಾಗರಹಾವು ರಕ್ಷಣೆ ಮಾಡುವ ಬರದಲ್ಲಿ ವಿಷಪೂರಿತ ಉರಗದ ಜೊತೆಗೆ ಜನರನ್ನು ಮೆಚ್ಚಿಸಲು ಹೋಗಿ ಉರಗ ರಕ್ಷಕ ಚೆಲ್ಲಾಟವಾಡಿರುವ ವೀಡಿಯೋ ವ್ಯಾಪಕ ಖಂಡನೆಗೆ ಕಾರಣವಾಗಿದೆ.
Advertisement
ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿ ಉರಗ ರಕ್ಷಕರೊಬ್ಬರು ವಿಷಪೂರಿತ ನಾಗರಹಾವಿನ ಜೊತೆಗೆ ಚೆಲ್ಲಾಟ ಆಡಿರುವ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಶುಕ್ರವಾರ ಗಣೇಶನ ಹಬ್ಬದ ವೇಳೆ ನೆಲಮಂಗಲ ನಗರದ ವಿಜಯನಗರದ ಪರಮಣ್ಣನವರ ಮನೆಯ ಬಳಿ ನಾಗರಹಾವು ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಸ್ಥಳೀಯರು ಸ್ನೇಕ್ ಅರುಣ್ ರಾಜ್‍ಗೆ ವಿಚಾರ ಮುಟ್ಟಿಸಿ ರಕ್ಷಣೆ ಮಾಡುವಂತೆ ಕರೆ ಮಾಡಿದ್ದಾರೆ. ಇದನ್ನೂ ಓದಿ: ಬೈಕ್ ಆಕ್ಸಿಡೆಂಟ್ – ಟಾಲಿವುಡ್ ನಟ ಸಾಯಿಧರ್ಮ ತೇಜ್ ಸ್ಥಿತಿ ಗಂಭೀರ
Advertisement
Advertisement
ಸ್ಥಳಕ್ಕೆ ಬಂದ ಸ್ನೇಕ್ ಅರುಣ್ ರಾಜ್ ಆ ನಾಗರಹಾವನ್ನು ರಕ್ಷಣೆ ಮಾಡಿ, ಹಾವಿನ್ನು ಕೈಯಲ್ಲಿ ಹಿಡಿದುಕೊಂಡು ಬೈಕ್ ಮೇಲೆ ಕುಳಿತು ಜನರಿಗೆ ಜಾಗೃತಿ ಮೂಡಿಸುವ ಬರದಲ್ಲಿ ಚೆಲ್ಲಾಟವಾಡಿರುವ ಬಂಗಿ ಆತಂಕಕ್ಕೆ ಕಾರಣವಾಗಿದೆ. ರಕ್ಷಣೆ ಮಾಡುವ ಬರದಲ್ಲಿ ವಿಷಪೂರಿತ ಹಾವುಗಳ ಜೊತೆಗೆ ಇಂತಹ ವರ್ತನೆ ಅಪಾಯಕಾರಿ, ಸಲ್ಪ ಯಾಮಾರಿದರೂ, ತಮ್ಮ ಪ್ರಾಣವನ್ನು ಪಣಕ್ಕೆ ಇಡಬೇಕಾಗುತ್ತೆ, ಹಾಗಾಗಿ ಇನ್ನಾದರೂ ಜಾಗೃತಿ ವಹಿಸಿ ಹಾವುಗಳನ್ನು ರಕ್ಷಣೆ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಕ್ರೂರತ್ವ- ಮನೆ, ಮನೆಗೆ ನುಗ್ಗಿ ಯುವಕರ ಬರ್ಬರ ಹತ್ಯೆ
Advertisement