ಚಿಕ್ಕಮಗಳೂರು: ಆಹಾರ ಹುಡುಕುತ್ತಾ ಕಾಡಿನಿಂದ ನಾಡಿಗೆ ಬಂದ ನಾಗರ ಹಾವೊಂದು ಮನೆಯೊಳಗೆ ನುಗ್ಗಿ ಕೋಳಿಯೊಂದನ್ನು ಸಾಯಿಸಿ, ನಾಲ್ಕು ಮೊಟ್ಟೆಯನ್ನ ನುಂಗಿ ಸಾವು ಬದುಕಿನ ಮಧ್ಯೆ ನರಳಾಡಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಚೇಗು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹರೀಶ್ ಎಂಬವರ ಮನೆಗೆ ಹಾವು ಬಂದಿದೆ. ನಂತರ ಒಂದು ಕೋಳಿಯನ್ನು ಸಾಯಿಸಿ ನಾಲ್ಕು ಮೊಟ್ಟೆಯನ್ನ ನುಂಗಿದೆ. ಆದ್ರೆ ನಾಲ್ಕು ಮೊಟ್ಟೆಗಳು ಗಂಟಲಿನಲ್ಲಿ ಸಿಲುಕಿ ಅಡುಗೆ ಮನೆಯಲ್ಲಿ ಬಿದ್ದು ಹೊರಳಾಡುತ್ತಿತ್ತು. ಇದನ್ನೂ ಓದಿ: 15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ಮಾಡಿದ ಉರಗತಜ್ಞ
ಹಾವಿನ ನರಳಾಟ ಕಂಡು ಹರೀಶ್ ಮನೆಯವರು ಭಯಗೊಂಡಿದ್ದು, ಕೂಡಲೇ ಉರುಗ ತಜ್ಞ ಆರೀಫ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಆರೀಫ್ ನಾಗರಹಾವನ್ನ ಹಿಡಿದು ಚಿಕಿತ್ಸೆ ನೀಡಿದ್ದಾರೆ. ನಾಗರ ಹಾವಿನ ಹೊಟ್ಟೆಯಲ್ಲಿದ್ದ ನಾಲ್ಕು ಮೊಟ್ಟೆಯನ್ನೂ ಹೊರಹಾಕಿಸಿದ್ದಾರೆ. ಇದನ್ನ ಕಂಡ ಗ್ರಾಮಸ್ಥರು ಆಶ್ಚರ್ಯ ಚಕಿತರಾಗಿದ್ದಾರೆ.
ಆರೀಫ್ ನಾಗರ ಹಾವನ್ನ ರಕ್ಷಣೆ ಮಾಡಿ ಚಾರ್ಮಾಡಿ ಘಾಟ್ ಗೆ ಬಿಟ್ಟಿದ್ದಾರೆ.
https://youtu.be/46aIxYtXo04