ಬೆಂಗಳೂರು: ಇಲ್ಲಿನ ಯಲಹಂಕದ ವಾಯನೆಲೆಯಲ್ಲಿ ಏರ್ ಶೋ ಕಾರ್ಯಕ್ರಮವೇನು ಅದ್ಧೂರಿಯಾಗಿ ನಡೆಯಿತು. ಆದ್ರೆ ಏರ್ ಶೋನಿಂದಾಗಿ ನಾಗರಹಾವುಗಳ ಮಾರಣ ಹೋಮವೇ ನಡೆದು ಹೋಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಹೌದು. ಏರ್ ಶೋ ನಡೆಯುವ ಸ್ಥಳ ಹಾವಿನ ವಾಸಸ್ಥಳವಾಗಿದೆ. ಏರ್ ಶೋ ಸಂದರ್ಭದಲ್ಲಿ ಭೂಮಿ ಕಂಪಿಸುತ್ತಿತ್ತು. ಈ ವೇಳೆ ಬೆದರಿ ಹಾವುಗಳು ಹೊರಬಂದಿದ್ದವು. ಜನಸಂದಣಿ ಹೆಚ್ಚಿದ್ರಿಂದ ಭೀತಿಗೊಂಡ ಜನ ಹಾವಿಗೆ ಕಲ್ಲು ಎಸೆದು ಕೊಂದಿದ್ದರು. ಕೊನೆಗೆ ವಿಷಯ ತಿಳಿದ ಸ್ನೇಕ್ ಶಿವಪ್ಪ, ಬರೋಬ್ಬರಿ ಬರೋಬ್ಬರಿ 27 ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಮಾತ್ರವಲ್ಲದೇ ಹಾವುಗಳ ಮಾರಣಹೋಮದಿಂದ ಬೇಸತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Advertisement
3 ವರ್ಷದ ಏರ್ ಶೋನಲ್ಲಿ ಐವತ್ತು ಹಾವನ್ನು ಕೊಂದು ಹಾಕಿದ್ದಾರೆ ಎಂದು ಆರೋಪ ಮಾಡಿದ ಶಿವಪ್ಪ, ನಾಗರಹಾವು ಕೊಂದ ಪಾಪ ಅವರಿಗೆ ಅಂಟಿಕೊಳ್ಳುತ್ತೆ. ಏರ್ ಶೋ ನಡೆಯೋ ಜಾಗಕ್ಕೂ ಕಂಟಕವಾಗಲಿದೆ. ಹಾವಿಗೆ ಸಂಸ್ಕಾರ ಮಾಡದೇ ಬೇಲಿ ಬದಿಯಲ್ಲಿ ಎಸೆದಿದ್ದಾರೆ. ಆ ಪಾಪ ಸುಮ್ಮನೆ ಬಿಡಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.