ಮಂಡ್ಯ: ಮನೆ ಆವರಣದಲ್ಲಿ ಸೇರಿಕೊಂಡಿದ್ದ ನಾಗರ ಹಾವೊಂದನ್ನು ಸೆರೆಹಿಡಿಯುವ ವೇಳೆ ಅದು ರಸ್ತೆಯಲ್ಲೇ 14 ಮೊಟ್ಟೆಯಿಟ್ಟ ಅಪರೂಪದ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಜಿಲ್ಲೆಯ ಮದ್ದೂರು ಪಟ್ಟಣದ ಶಿಕ್ಷಕರ ಬಡಾವಣೆಯಲ್ಲಿ ಇರುವ ರವಿ ಎಂಬವರ ಮನೆಯ ಆವರಣದಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು. ಇದರಿಂದ ಭಯಗೊಂಡ ರವಿ ಅವರು ಹಾವನ್ನು ಸೆರೆಹಿಡಿಯುವಂತೆ ಉರಗ ತಜ್ಞರಿಗೆ ತಿಳಿಸಿದ್ದಾರೆ. ಈ ಮಾಹಿತಿ ಮೇರೆಗೆ ಉರಗ ತಜ್ಞ ಮನ್ ಹಾಗೂ ಪ್ರಸನ್ನಕುಮಾರ್ ಸ್ಥಳಕ್ಕೆ ಬಂದು ಹಾವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ.
Advertisement
Advertisement
ಈ ವೇಳೆ ಹಾವು ಮನೆ ಆವರಣದಿಂದ ರಸ್ತೆಗೆ ಬಂದು ಮೊಟ್ಟೆಯಿಡಲು ಶುರು ಮಾಡಿದೆ. ಒಟ್ಟು 14 ಮೊಟ್ಟೆಯನ್ನು ರಸ್ತೆಯಲ್ಲಿಯೇ ನಾಗರಹಾವು ಇಟ್ಟಿದ್ದು, ಈ ಅಪರೂಪದ ದೃಶ್ಯವನ್ನು ಕಂಡ ಸ್ಥಳೀಯರು ಇದನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಹಾವು ಪೂರ್ಣವಾಗಿ ಮೊಟ್ಟೆಯಿಟ್ಟ ಬಳಿಕ ಅದನ್ನು ಸೆರೆಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶದಕ್ಕೆ ಮನ್ ಅವರು ಬಿಟ್ಟು ಬಂದಿದ್ದಾರೆ. ಹಾಗೆಯೇ ಹಾವಿನ ಮೊಟ್ಟೆಗಳನ್ನೂ ಪ್ರಸನ್ನಕುಮಾರ್ ಅವರು ರಕ್ಷಣೆ ಮಾಡಿದ್ದಾರೆ.
Advertisement
https://www.youtube.com/watch?v=DUZkD2ixKgM