ಚಿಕ್ಕಮಗಳೂರು: ಲಾರಿಯ ಸ್ಟೇರಿಂಗ್‍ಗೆ ಕೈ ಹಾಕುತ್ತಿರುವಾಗ ಇಂಜಿನ್‍ನಲ್ಲಿ ಹಾವು ಕಂಡಿದ್ದು, ಇದನ್ನು ನೋಡಿದ ಚಾಲಕ ಲಾರಿಯನ್ನು ಬಿಟ್ಟು ಎದ್ನೋ ಬಿದ್ನೋ ಎಂದು ಓಡಿ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್‍ನಲ್ಲಿ ನಡೆದಿದೆ.
ಬಣಕಲ್‍ನ ರೈಸ್‍ಮಿಲ್‍ನಲ್ಲಿ ಲಾರಿಗೆ ಅಕ್ಕಿಯ ಮೂಟೆಗಳನ್ನು ಲೋಡ್ ಮಾಡಲಾಗಿತ್ತು. ಲಾರಿಯನ್ನು ಹೊರ ತೆಗೆಯಲು ಚಾಲಕ ಲಾರಿಗೆ ಹತ್ತಿದ ಕೂಡಲೇ ಹಾವನ್ನು ನೋಡಿ ಕೆಳಗಿಳಿದು ಓಡಿ ಹೋಗಿದ್ದಾನೆ. ಕೂಡಲೇ ರೈಸ್‍ಮಿಲ್ ಮಾಲೀಕ ಸ್ನೇಕ್ ಆರೀಫ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಲಾರಿಯ ಇಂಜಿನ್‍ನಲ್ಲಿದ್ದ ನಾಗರಹಾವನ್ನು ಸೆರೆ ಹಿಡಿದು ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಟ್ಟಿದ್ದಾರೆ.
https://www.youtube.com/watch?v=Wwl-2ZFkHXQ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv