ರಾಮನಗರ: ಜಿಲ್ಲಾ ಪಂಚಾಯತ್‍ನ ಮುಂಭಾಗದ ಪಿಲ್ಲರ್ ಬಳಿ ಮೂರಡಿ ಉದ್ದದ ನಾಗರಹಾವು ಪ್ರತ್ಯೇಕ್ಷವಾಗಿ ಅಧಿಕಾರಿಗಳು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಅಲ್ಲದೇ ಕಚೇರಿಗೆ ಪ್ರವೇಶ ಮಾಡಲು ಹೆದರಿ ಮತ್ತೊಂದು ಗೇಟ್ ಮೂಲಕ ಪ್ರವೇಶಿಸುವಂತಹ ವಾತಾವರಣ ಜಿಲ್ಲೆಯಲ್ಲಿ ಸೃಷ್ಟಿಯಾಗಿತ್ತು.
ಪಂಚಾಯತ್ ಕಟ್ಟಡದ ಕಚೇರಿಯೊಳಗೆ ಹೋಗುತ್ತಿದ್ದ ಸಾರ್ವಜನಿಕರ ಕಣ್ಣಿಗೆ ನಾಗರ ಹಾವು ಕಾಡಿಸಿಕೊಂಡಿದೆ. ವಿಚಾರ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸಹ ಭಯಬೀತರಾಗಿದ್ದರು. ದಿನನಿತ್ಯ ಇಲ್ಲೇ ಓಡಾಡುತ್ತಿದ್ದೇವೆ ಈ ದಿನ ಎಲ್ಲಿಂದ ಬಂತು, ನಾನು ಇಲ್ಲೇ ಆಗಲೇ ಕಚೇರಿ ಒಳಗೆ ಹೋದ ಕಚ್ಚಿದ್ದರೆ ಅಷ್ಟೇ ಎಂದು ತಮ್ಮ ಸಹೋದ್ಯೋಗಿಗಳ ಬಳಿ ಆತಂಕ ವ್ಯಕ್ತಪಡಿಸಿದ್ದರು.
Advertisement
Advertisement
ಕಚೇರಿಯ ಮುಂಭಾಗ ಹಾವು ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದು, ಉರಗ ತಜ್ಞರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಯುವಕ ಹಾವನ್ನ ರಕ್ಷಿಸಿ ಗೋಣಿಚೀಲದಲ್ಲಿ ಹಾಕಿಕೊಂಡು ಹೋಗಿದ್ದಾನೆ. ಬಳಿಕ ನಾಗರ ಹಾವನ್ನ ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಬಿಡಲಾಗಿದೆ.