DistrictsKarnatakaLatestMysuru

ಪೊಲೀಸ್ ಜೀಪ್ ಟೈರಿನಲ್ಲಿ ನಾಗರಹಾವು ಪ್ರತ್ಯಕ್ಷ

Advertisements

ಮೈಸೂರು: ಮೈಸೂರಿನಲ್ಲಿ ಪೊಲೀಸ್ ಜೀಪ್ ಟೈರಿನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ.

ಮೈಸೂರಿನ ಪೊಲೀಸ್ ಅಕಾಡೆಮಿ ಡಿವೈಎಸ್‍ಪಿ ಮಾರುತಿ ಅವರಿದ್ದ ಜೀಪಿನ ಟೈರ್ ನಲ್ಲಿ ಹಾವು ಕಾಣಿಸಿಕೊಂಡಿದೆ. ನಗರದ ಜಯಚಾಮರಾಜೇಂದ್ರ ವೃತ್ತದ ಬಳಿ ಪೊಲೀಸರು ತಮ್ಮ ಜೀಪ್‍ನ್ನು ನಿಲ್ಲಿಸಿದ್ದರು. ಈ ವೇಳೆ ನಾಗರಹಾವು ಜೀಪ್‍ನ ಟೈರ್ ಹೊರ ಭಾಗದಲ್ಲಿ ಕಾಣಿಸಿಕೊಂಡಿದೆ.

ನಾಗರಹಾವನ್ನು ನೋಡಿದ ಪೊಲೀಸರು ತಕ್ಷಣ ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸ್ನೇಕ್ ಶ್ಯಾಂ ಟೈರ್‍ನಲ್ಲಿ ಸುತ್ತಿಕೊಂಡಿದ್ದ ನಾಗರಹಾವನ್ನು ಹೊರತೆಗೆದಿದ್ದಾರೆ.

ಸ್ನೇಕ್ ಶ್ಯಾಂ ನಾಗರಹಾವನ್ನು ರಕ್ಷಿಸುವಾಗ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ.

https://www.youtube.com/watch?v=6VepWyyl_TA

Leave a Reply

Your email address will not be published.

Back to top button