ನವದೆಹಲಿ: ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಬಂದಿದ್ದ ಸಂದರ್ಭ ಸುಲ್ತಾನ್‌ಪುರದ (Sulthanpur) ಚಮ್ಮಾರನ (Cobbler)ಅಂಗಡಿಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಹೊಲಿದಿದ್ದ ಚಪ್ಪಲಿಗೆ ಭಾರೀ ಬೇಡಿಕೆ ಬಂದಿದೆ. ರಾಗಾ ಹೊಲಿದ ಚಪ್ಪಲಿಗೆ ವ್ಯಕ್ತಿಯೊಬ್ಬರು 10 ಲಕ್ಷ ರೂ.ಗೆ ಬೇಡಿಕೆ ಇಟ್ಟರೂ ಸಹ ಚಮ್ಮಾರ ರಾಮ್ ಚೈತ್ ಚಪ್ಪಲಿಯನ್ನು ಮಾರಾಟ ಮಾಡಲು ನಿರಾಕರಿಸಿದ್ದಾರೆ.
ಈ ಕುರಿತು ಚಮ್ಮಾರ ರಾಮ್ ಚೈತ್ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಹೊಲಿದಿರುವ ಈ ಚಪ್ಪಲಿ ನನ್ನ ಅದೃಷ್ಟ ಎಂದು ಭಾವಿಸಿ ಅದನ್ನು ಫ್ರೇಮ್ ಹಾಕಿಸಿ ಜೋಪಾನವಾಗಿ ನನ್ನ ಅಂಗಡಿಯಲ್ಲಿ ಇಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಆಟವಾಡುತ್ತಾ ಮೆಟ್ರೋ ಹಳಿಗೆ ಬಿದ್ದ ಮಗು – ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಪಾರು
Advertisement
Advertisement
ರಾಹುಲ್ ಗಾಂಧಿ ಭೇಟಿ ಬಳಿಕ ಜನರು ನನ್ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಆ ಚಪ್ಪಲಿಗಾಗಿ ನನಗೆ ಸಾಕಷ್ಟು ಕರೆಗಳು ಬರುತ್ತಿವೆ. ಆ ಚಪ್ಪಲಿಗೆ 10 ಲಕ್ಷ ರೂ.ವರೆಗೆ ಬೇಡಿಕೆ ಬಂದಿದೆ. ಆದರೆ ನಾನು ಅದನ್ನು ತಿರಸ್ಕರಿಸಿದ್ದೇನೆ. ಆ ಚಪ್ಪಲಿಯನ್ನು ನಾನು ಯಾರಿಗೂ ಮಾರಾಟ ಮಾಡುವುದಿಲ್ಲ ಎಂದು ಚಮ್ಮಾರ ರಾಮ್ ಚೈತ್ ತಿಳಿಸಿದ್ದಾರೆ. ಇದನ್ನೂ ಓದಿ: MUDA Scam | ಸರ್ಕಾರ Vs ರಾಜಭವನ – ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು?
Advertisement
Advertisement
ಜು.26 ರಂದು ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆ ಪ್ರಕರಣವೊಂದರ ವಿಚಾರಣೆಗೆ ಉತ್ತರ ಪ್ರದೇಶದಕ್ಕೆ ಬಂದಾಗ ಸುಲ್ತಾನ್‌ಪುರದ ಬೀದಿಬದಿಯಿರುವ ರಾಮ್ ಚೈತ್ ಎಂಬ ಚಮ್ಮಾರನ ಅಂಗಡಿಗೆ ದಿಢೀರ್ ಭೇಟಿ ನೀಡಿದ್ದರು. ಇದನ್ನೂ ಓದಿ: ಅಮ್ಮನ ಸಾವಿನ ಅಗಲಿಕೆಯಿಂದ ಮನನೊಂದು ಅಣ್ಣ, ತಂಗಿ ಆತ್ಮಹತ್ಯೆ
#WATCH | Sultanpur, UP: Shopkeeper claims slippers stitched by LoP Rahul Gandhi are in high demand, price upto Rs. 10 lakhs.
Cobbler Ramchait says, “People are clicking selfies with me. Rahul Gandhi contacted me. I am getting a lot of calls for that slipper… I have been… pic.twitter.com/aky1Vu9smw
— ANI (@ANI) August 1, 2024
ರಾಹುಲ್ ಗಾಂಧಿ ಮತ್ತು ಚಮ್ಮಾರ ರಾಮ್ ಚೈತ್ ನಡುವೆ ಕುಶಲೋಪರಿಯ ಮಾತುಕತೆಯ ಬಳಿಕ ರಾಹುಲ್ ಗಾಂಧಿ ಚಪ್ಪಲಿಯೊಂದಕ್ಕೆ ಹೋಲಿಗೆ ಹಾಕಲು ಪ್ರಯತ್ನಿಸಿದ್ದರು. ಮಾರನೇ ದಿನ ಆ ಚಮ್ಮಾರನಿಗೆ ಹೊಲಿಗೆ ಯಂತ್ರವೊಂದು ಕಳುಹಿಸಿ ಮಾನವೀಯತೆ ಮೆರೆದಿದ್ದರು. ಇದನ್ನೂ ಓದಿ: ವಯನಾಡು ಭೂಕುಸಿತ ದುರಂತ; ಒಂದೇ ಚಿತೆಯಲ್ಲಿ ಅಜ್ಜಿ-ಮೊಮ್ಮಗನ ಅಂತ್ಯಕ್ರಿಯೆ