ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಅನ್ನು ಮೈತ್ರಿ ಸರ್ಕಾರ ತಿರಸ್ಕರಿಸಿದೆ. ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರ ಬಜೆಟ್ ತಿರಸ್ಕರಿಸಿದೆ.
2019-20ನೇ ಸಾಲಿನ ಬಜೆಟ್ ಅನ್ನು ಫೆ.19 ರಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಮಂಡಿಸಿದ್ದರು. ಆರಂಭದಲ್ಲಿ 10,688 ಕೋಟಿ ರೂ. ಇದ್ದ ಬಜೆಟ್‍ಗೆ ಕೆಲ ಮಾರ್ಪಾಡುಗಳನ್ನು ಮಾಡಿದ್ದರಿಂದ ಮೊತ್ತ 12,74.77 ಕೋಟಿ ರೂ.ಗೆ ಹಿಗ್ಗಿತ್ತು. ಈ ಪರಿಷ್ಕ್ರತ ಬಜೆಟ್‍ಗೆ ಪಾಲಿಕೆಯ ಕೌನ್ಸಿಲ್ ಒಪ್ಪಿಗೆ ನೀಡಿತ್ತು.
Advertisement
Advertisement
ಬಿಬಿಎಂಪಿ ಇತಿಹಾಸದಲ್ಲಿ 12,574 ಕೋಟಿ ರೂ. ವೆಚ್ಚದ ಬೃಹತ್ ಬಜೆಟ್ ಮಂಡಿಸಿರುವುದು ಇದೇ ಮೊದಲು ಆಗಿತ್ತು. ಈಗ 4 ಸಾವಿರ ಕೋಟಿ ಇಳಿಸಿ ಎಂದು ಆರ್ಥಿಕ ಇಲಾಖೆ ಸೂಚಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಬಜೆಟ್ ಗಾತ್ರ 9,0574 ಕೋಟಿ ರೂ.ಗೆ ಇಳಿಕೆಯಾಗಲಿದೆ.
Advertisement
ಬಜೆಟ್ ತಿರಸ್ಕರಿಸಿದ್ದಕ್ಕೆ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಪ್ರತಿಕ್ರಿಯಿಸಿ, ಮೈತ್ರಿ ಸರ್ಕಾರಕ್ಕೆ ಬೆಂಗಳೂರು ಅಭಿವೃದ್ಧಿ ಬೇಕಿಲ್ಲ. ನಾವು ನೀಡಿದ ಸಲಹೆಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿ ಆಕ್ರೋಶ ಹೊರಹಾಕಿದ್ದಾರೆ.