ಹುಬ್ಬಳ್ಳಿ: ಸರ್ಕಾರ ಬದಲಾಗುತ್ತೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಈ ಸರ್ಕಾರಕ್ಕೆ ಏನೂ ಆಗಲ್ಲ. ಸಮ್ಮಿಶ್ರ ಸರ್ಕಾರ ಬಹಳ ಭದ್ರವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ ಎನ್ನುವುದು ಶುದ್ಧ ಸುಳ್ಳು. ಬಿಜೆಪಿಯವರ ಆಸೆ ಈಡೇರುವುದಿಲ್ಲ. ಮತ್ತೊಮ್ಮೆ ಸಿಎಂ ಆಗುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಮುಂದಿನ ಚುನಾವಣೆ ಆದ ಮೇಲೆ ಸಿಎಂ ಆಗುತ್ತೇನೆ ಎಂದಿದ್ದೇನೆ. ಮುಂದಿನ ಚುನಾವಣೆಗೆ ನಿಲ್ಲುತ್ತೇನೆ ಎಂದು ನಾನು ಹೇಳಿಲ್ಲ. ಜನರು ಆಶೀರ್ವಾದ ಮಾಡಿದರೆ ಮುಂದೆ ಸಿಎಂ ಆಗುತ್ತೇನೆ ಎಂದಷ್ಟೇ ಹೇಳಿದ್ದೇನೆ ಅಂತ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಮ್ಮಿಶ್ರ ಸರ್ಕಾರ ಏನೇ ಮಾಡಿದರೂ ಎರಡೂ ಪಕ್ಷಕ್ಕೆ ಗೌರವ ಸಲ್ಲುತ್ತದೆ. ನಮ್ಮವರೇ ಮಂತ್ರಿಗಳಾಗಿದ್ದಾರೆ. ಹೀಗಾಗಿ ನಮ್ಮನ್ನು ಕಡೆಗಣಿಸುತ್ತಾರೆ ಎನ್ನುವುದು ಸರಿಯಲ್ಲ. ಜೆಡಿಎಸ್‍ನವರು ಕೆ.ಸಿ ವೇಣುಗೊಪಾಲ್‍ಗೆ ಪತ್ರ ಬರೆದಿಲ್ಲ, ದೂರು ನೀಡಿಲ್ಲ. ನಾವು ಜಾರಿಗೆ ತಂದಿರುವ ಎಲ್ಲ ಸ್ಕೀಮ್‍ಗಳಿಗೂ ಹಣ ಬಿಡುಗಡೆಯಾಗುತ್ತದೆ. ಸಮನ್ವಯ ಸಮಿತಿಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv