ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿಗಿಂತ ರೇವಣ್ಣ ಸಾಹೇಬ್ರೇ ಪವರ್ ಫುಲ್. ಅವರ ಇಲಾಖೆಯೇ ಫೇಮಸ್ ಎಂದು ಹೇಳೋದಕ್ಕೂ ಕಾರಣ ಇದೆ. ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಗೆ ಅತಿ ಹೆಚ್ಚು ಅನುದಾನ ಸಿಕ್ಕಿದೆ.
ಪ್ರತಿ ಕ್ಯಾಬಿನೆಟ್ ಸಭೆಯಲ್ಲೂ ರೇವಣ್ಣ ಇಲಾಖೆ ಅಥವಾ ರೇವಣ್ಣ ತವರು ಹಾಸನ ಜಿಲ್ಲೆಯ ಟಾಪಿಕ್ ಇದ್ದೇ ಇರುತ್ತದೆ. ಸಿಎಂ ಪ್ರತಿ ಕ್ಯಾಬಿನೆಟ್ ಸಭೆಯಲ್ಲೂ ರೇವಣ್ಣ ಇಲಾಖೆ ಅಥವಾ ರೇವಣ್ಣ ತವರು ಹಾಸನ ಜಿಲ್ಲೆಯ ಟಾಪಿಕ್ ಇದ್ದೇ ಇರುತ್ತದೆ. ಸಿಎಂ ಕುಮಾರಸ್ವಾಮಿ ಕೂಡ ರೇವಣ್ಣರ ಯಾವ ಕೆಲಸಕ್ಕೂ ಇಲ್ಲ ಅನ್ನೋದೇ ಇಲ್ಲ. ಪ್ರತಿ ಸಮಯದಲ್ಲೂ ಯಾವ ಫೈಲ್‍ಗಾದ್ರೂ ಕಣ್ಮುಚ್ಚಿ ಸೈನ್ ಹಾಕ್ತಾರಂತೆ ಮುಖ್ಯಮಂತ್ರಿ ಕುಮಾರಸ್ವಾಮಿ.
Advertisement
ಹಾಗಾದ್ರೆ ರೇವಣ್ಣ ಮತ್ತು ಅವರ ಇಲಾಖೆ ಪವರ್ ಹೇಗಿದೆ ಅಂತಾ ನೋಡೋದಾದ್ರೆ..
– ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‍ನಲ್ಲಿ 9271 ಕೋಟಿ ಅನುದಾನ
– ಎಚ್‍ಡಿಕೆ ಮಂಡಿಸಿದ ಬಜೆಟ್‍ನಲ್ಲಿ ಹೆಚ್ಚುವರಿ 929 ಕೋಟಿ ರೂ.
– ಪೂರಕ ಬಜೆಟ್‍ನಲ್ಲಿ ರೇವಣ್ಣ ಇಲಾಖೆಗೆ 1700 ಕೋಟಿ ಅನುದಾನ
Advertisement
Advertisement
ವರ್ಗಾವಣೆ ಪವರ್.!
ಎಕ್ಸಿಕ್ಯುಟಿವ್ ಎಂಜಿನಿಯರ್ 15, 200 ಕ್ಕೂ ಹೆಚ್ಚು ಎಇಇಗಳು, 500ಕ್ಕೂ ಹೆಚ್ಚು ಎಇ-ಜೆಇಳು, ಹಾಗೂ 100ಕ್ಕೂ ಹೆಚ್ಚು ಬಿ ದರ್ಜೆ ನೌಕರರ ವರ್ಗ. ಹೀಗೆ 7 ತಿಂಗಳಲ್ಲಿ 1 ಸಾವಿರಕ್ಕೂ ಹೆಚ್ಚು ವರ್ಗಾವಣೆ ಮಾಡಲಾಗಿದೆ.
Advertisement
ಕ್ಯಾಬಿನೆಟ್ ಪವರ್..!
ಒಟ್ಟು 16 ಕ್ಯಾಬಿನೆಟ್ ಸಭೆಗಳು ನಡೆದಿದ್ದು, ಪ್ರತಿ ಸಭೆಯಲ್ಲೂ ಲೋಕೋಪಯೋಗಿ ಇಲಾಖೆಯ 2-3 ವಿಷಯ ಅಪ್ರೂವ್ ಆಗುತ್ತಿದೆ. ಕ್ಯಾಬಿನೆಟ್‍ನಲ್ಲಿ ಒಟ್ಟು 20ಕ್ಕೂ ಹೆಚ್ಚು ವಿಷಯಗಳು ಅಪ್ರೂವ್ ಆಗಿವೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv