ಇಂದು (ಏ.2) ಹಲವು ನಗರಗಳಲ್ಲಿ ಇಡಿ ದಾಳಿ ನಡೆಸಿ , ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಐಪ್ಯಾಕ್ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ರಿಷಿ ರಾಜ್ ಸಿಂಗ್ ಅವರಿಗೆ ಸಂಬಂಧಿಸಿದ ಕೆಲವು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಬೆಂಗಳೂರಿನ ನಿವಾಸದ ಮೇಲೆಯೂ ದಾಳಿ ನಡೆಸಲಾಗಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
ಇದಕ್ಕೂ ಮುನ್ನ ಇದೇ ಪ್ರಕರಣ ಸಂಬಂಧ ಇಡಿ ಜನವರಿ ತಿಂಗಳಲ್ಲಿ ಐಪ್ಯಾಕ್ ಕಚೇರಿ ಹಾಗೂ ಸಂಸ್ಥಾಪಕ, ನಿರ್ದೇಶಕ ಪ್ರತೀಕ್ ಗಾಂಧಿ ಅವರ ಕೋಲ್ಕತ್ತಾ ನಿವಾಸ ಸೇರಿದಂತೆ ಹಲವು ಕಡೆ ದಾಳಿ ನಡೆಸಿತ್ತು. ಅದಾದ ಬಳಿಕ ವಿಚಾರಣೆಗಾಗಿ ಸಮನ್ಸ್ ಕೂಡ ಜಾರಿ ಮಾಡಿತ್ತು.
ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ನಡೆಯುತ್ತಿರುವ ಚುನಾವಣಾ ಕೆಲಸದಲ್ಲಿ ತಾವು ಭಾಗಿಯಾಗಿದ್ದೀರಿ ಎಂದು ಉಲ್ಲೇಖಿಸಿ ನೀಡಲಾದ ನೋಟಿಸ್ ಅನ್ನು ರದ್ದುಗೊಳಿಸಬೇಕೆಂದು ಇಬ್ಬರು ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ರಾಜಮುಡಿ ಅಕ್ಕಿಗೆ ಶೀಘ್ರ GI ಟ್ಯಾಗ್ ನೀಡಿ: ಹಾಸನ ಸಂಸದ ಶ್ರೇಯಸ್ ಪಟೇಲ್ ಕೇಂದ್ರಕ್ಕೆ ಮನವಿ

