ಬಾಲಿವುಡ್‌ನಲ್ಲಿ ಸದ್ಯ ‘ಕ್ರೂ’ (Crew Film) ಸಿನಿಮಾಗೆ ಪ್ರಶಂಸೆ ವ್ಯಕ್ತವಾಗಿದೆ. ಟಬು (Tabu), ಕರೀನಾ ಕಪೂರ್, ಕೃತಿ ಸನೋನ್ (Kriti Sanon) ನಟನೆಯ ‘ಕ್ರೂ’ ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರದ ‘ಕ್ರೂ’ ಸೀಕ್ವೆಲ್ ಬರೋದರ ಬಗ್ಗೆ ಸಹ-ನಿರ್ಮಾಪಕಿ ರಿಯಾ ಕಪೂರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಯುಗಾದಿ ಹಬ್ಬಕ್ಕೆ ‘ಫುಲ್ ಮಿಲ್ಸ್’ ಚಿತ್ರದ ಸ್ಪೆಷಲ್ ಪೋಸ್ಟರ್

View this post on Instagram
ಕ್ರೂ ಸಿನಿಮಾ 100 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಹಾಗಾಗಿ ಸೀಕ್ವೇಲ್‌ಗಾಗಿ ಕಥೆ ಕೂಡ ಸಿದ್ಧವಾಗುತ್ತಿದೆ. ಉತ್ತಮ ಕಥೆಯೊಂದಿಗೆ ಮತ್ತೆ ‘ಕ್ರೂ’ ತಂಡ ಬರೋದಾಗಿ ಮಾಹಿತಿ ನೀಡಿದ್ದಾರೆ.
ಈ ಚಿತ್ರಕ್ಕೆ ರಾಜೇಶ್ ಎ. ಕೃಷ್ಣನ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಏಕ್ತಾ ಕಪೂರ್, ರಿಯಾ ಕಪೂರ್, ಅನಿಲ್ ಕಪೂರ್, ದಿಗ್ವಿಜಯ್ ಪುರೋಹಿತ್ ಅವರು ನಿರ್ಮಾಣ ಮಾಡಿದ್ದಾರೆ. ದಿಲ್ಜಿತ್ ದೋಸಾಂಜ್, ಕಪಿಲ್ ಶರ್ಮಾ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

