ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಭಾನುವಾರದವರೆಗೆ 7 ಮಂದಿಗೆ ಕೊರೊನಾ ಇತ್ತು. ಈಗ ಅಮೆರಿಕದಿಂದ ಆಗಮಿಸಿದ ಟೆಕ್ಕಿಯ ಸಹೋದ್ಯೋಗಿಯಲ್ಲಿ ಕೊರೊನಾ ಇರುವುದು ಪತ್ತೆಯಾಗಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಇವತ್ತಿನವರೆಗೆ 8 ಮಂದಿಗೆ ಕೊರೊನಾ ಬಂದಿದೆ. ಇಂದು ಶಂಕಿತ 244 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೈಂಡ್ ಟ್ರೀ ಕಂಪನಿಯ ಟೆಕ್ಕಿ ಮಾರ್ಚ್ 8 ರಂದು ಬೆಂಗಳೂರಿಗೆ ಬಂದಿದ್ದ. ಇದು ಕೊರೊನಾ ಪೀಡಿತ 4ನೇ ಕೇಸ್ ಆಗಿದ್ದು ಈ ಟೆಕ್ಕಿಯ ಜೊತೆಯಲ್ಲಿ 32 ವರ್ಷದ ಈತ ತೆರಳಿದ್ದ. ಮನೆಯಲ್ಲೇ ನಿಗಾದಲ್ಲಿದ್ದ ಈತ ಈಗ ಆಸ್ಪತ್ರೆಗೆ ದಾಖಲಾಗಿದ್ದು ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.
ಈಗ ಟೆಕ್ಕಿಯ ಪತ್ನಿ ಮತ್ತು ಮನೆ ಕೆಲಸದಾಕೆಯ ಮೇಲೆ ನಿಗಾ ಇಡಲಾಗಿದೆ ಮತ್ತು ಈತನ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆ ಮುಂದಾಗುತ್ತಿದೆ. ಇಂದು ರಾಜ್ಯದಲ್ಲಿ ಒಟ್ಟು 9 ಮಂದಿ ಒಳರೋಗಿಗಳಾಗಿ ದಾಖಲಾಗಿದ್ದು, 36 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 44 ಮಂದಿ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾದಲ್ಲಿದ್ದಾರೆ.
8 ಮಂದಿಯಲ್ಲಿ 6 ಮಂದಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದರೆ. ಒಬ್ಬರು ಕಲಬುರಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
8 ಮಂದಿ ಯಾರೆಲ್ಲ?
1. ಡೆಲ್ ಕಂಪನಿಯ ಟೆಕ್ಕಿ, ಆತನ ಪತ್ನಿ, ಮಗಳು
2. ಮೈಂಡ್ ಟ್ರೀ ಕಂಪನಿಯ ಟೆಕ್ಕಿ
3. ಕಲಬುರಗಿ ವ್ಯಕ್ತಿ(ಕೊರೊನಾದಿಂದ ನಿಧನ)
4. ಗೂಗಲ್ ಕಂಪನಿಯ ಟೆಕ್ಕಿ
5. ಕೊರೊನಾದಿಂದ ಮೃತಪಟ್ಟ ಕಲಬುರಗಿ ವ್ಯಕ್ತಿಯ ಮಗಳು
6. ಮೈಂಡ್ ಟ್ರೀ ಕಂಪನಿಯ ಟೆಕ್ಕಿ ಜೊತೆ ಪ್ರಯಾಣಿಸಿದ ಸಹೋದ್ಯೋಗಿ