ಬೆಂಗಳೂರು: ಸಿಲಿಕಾನ್ ಸಿಟಿಗೆ ಕೋ ಲಿವಿಂಗ್ ಕಲ್ಚರ್ ಕಾಲಿಟ್ಟಿದೆ. ಸಾಮಾನ್ಯ ಪಿಜಿಗಳನ್ನ (CO Living PG) ನಡೆಸುವುದಾಗಿ ಟ್ರೇಡ್ ಲೈಸನ್ಸ್ ಪಡೆದು, ಬಾಡಿಗೆ ಮನೆ, ಅಪಾರ್ಟ್ಮೆಂಟ್‌ಗಳಲ್ಲಿ ಹುಡ್ಗ-ಹುಡುಗಿ ಒಂದೇ ರೂಂ ಶೇರ್ ಮಾಡಿಕೊಳ್ತಿದ್ದಾರಂತೆ. ಇದರಿಂದ ಪಿಜಿ ಮಾಲೀಕರ ಬ್ಯೂಸಿನೆಸ್‌ಗೆ ಹೊಡೆತ ಬೀಳ್ತಿದೆ ಎಂದು ಕೆಲ ಪಿಜಿ ಮಾಲೀಕರು ಬಿಬಿಎಂಪಿ (BBMP) ಆಯುಕ್ತರಿಗೆ ದೂರು ನೀಡಿದ್ದಾರೆ.
Advertisement
ಕೋರಮಂಗಲ, ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಮಾನ್ಯತಾ ಟೆಕ್ ಪಾರ್ಕ್ ಸೇರಿ ಹಲವೆಡೆ ಕೋ ಲೀವಿಂಗ್ ಪಿಜಿಗಳು ಹೆಚ್ಚಾಗಿವೆ. ಜೆಂಟ್ಸ್, ಲೇಡಿಸ್‌ನ ಪ್ರತ್ಯೇಕ ಪಿಜಿಗಳ ಲೈಸನ್ಸ್ ಪಡೆದು, ಕೋ ಲಿವಿಂಗ್ ನಡೆಸ್ತಿರೋದರ ಬಗ್ಗೆ ಪಾಲಿಕೆಗೂ ಸ್ಪಷ್ಟ ಮಾಹಿತಿಯಿಲ್ಲ. ಬಿಬಿಎಂಪಿ ವಿಶೇಷ ಆಯುಕ್ತರ ಗಮನಕ್ಕೆ ಈ ವಿಚಾರ ಬಂದಿದ್ದು ಪರಿಶೀಲಿಸ್ತಿವಿ ಅಂತಿದ್ದಾರೆ. ಪಿಜಿ ಮಾಲೀಕರ ಸಂಘ ಕೂಡ ಕೋ ಲಿವಿಂಗ್ ಪಿಜಿಗಳಿಗೆ ಯಾವ ಮಾನದಂಡಗಳ ಮೇಲೆ ಲೈಸನ್ಸ್ ಕೊಡ್ತಿದ್ದಿರಿ ಅಂತ ಪ್ರಶ್ನಿಸಿದ್ದು, ಈ ಅನುಮತಿ ಪತ್ರ ನೀಡುವ ವಿಚಾರದಲ್ಲಿ ಪುನರ್ ಪರಿಶೀಲಿಸಿ ಅಂತ ಮನವಿ ಮಾಡಿದ್ದಾರೆ.
Advertisement
Advertisement
ಕೋ ಲಿವಿಂಗ್ ಪಿಜಿಗಳು ಅಕ್ರಮವೋ, ಸಕ್ರಮವೋ..? ಪಾಲಿಕೆಯ ಅಧಿಕಾರಿಗಳಿಗೆ ಈ ಬಗ್ಗೆ ಅರಿವಿಲ್ಲ. ಒಂದೊಮ್ಮೆ ಪಾಲಿಕೆ ಕೋ ಲಿವಿಂಗ್‌ಗೆ ಅನುಮತಿ ನೀಡಿದ್ರೆ ಪ್ರತ್ಯೇಕ ಗೈಡ್ ಲೈನ್ಸ್ ತರಬೇಕಾಗುತ್ತೆ. ಈ ಸಂಸ್ಕೃತಿಗೆ ಹಿಂದೂ ಸಂಘಟನೆಗಳಿಂದಲೂ ವಿರೋಧಗಳು ವ್ಯಕ್ತವಾಗ್ತಿವೆ.