– ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ಶಿಕ್ಷಕಿಯರಿಂದಲೇ ಪಾಠ
ಕಾಬೂಲ್: ಅಫ್ಘಾನಿಸ್ತಾನ ವಶ ಪಡೆದುಕೊಂಡಿರುವ ತಾಲಿಬಾನಿಗಳು ದಿನಕ್ಕೊಂದು ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಹುಡುಗ ಮತ್ತು ಹುಡುಗಿಯರು ಶಾಲೆಗಳಲ್ಲಿ ಜೊತೆಯಾಗಿ ಓದುವಂತಿಲ್ಲ. ವಿದ್ಯಾರ್ಥಿಗಳು ಶಿಕ್ಷಕರು ಪಾಠ ಮಾಡುವ ಹಾಗಿಲ್ಲ. ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ಶಿಕ್ಷಕಿಯರೇ ಪಾಠ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಶನಿವಾರ ಶೇಖ್ ಅಬ್ದುಲ್ ಬಾಕಿ ಹಕ್ಕಾನಿಯನ್ನು ಶಿಕ್ಷಣ ಸಚಿವ ಎಂದು ತಾಲಿಬಾನಿಗಳು ನೇಮಕ ಮಾಡಿದ್ದವು. ಇದಕ್ಕೂ ಮೊದಲು ಅಫ್ಘಾನಿಸ್ತಾನದ ಪೂರ್ವ ಹೆರಾತ್ ನಗರದಲ್ಲಿ ಕೋ-ಎಜುಕ್ಷೆನ್ ಮೇಲೆ ನಿರ್ಬಂಧ ಹಾಕಲಾಗಿತ್ತು.
Advertisement
Advertisement
ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯ ಪಖ್ತೂನಾಖ್ವಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪಾಕ್ ಸೈನಿಕರಿಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮೊದಲಿಗೆ ಅಫ್ಘಾನಿಸ್ತಾನವೇ ಗುಂಡಿನ ದಾಳಿ ನಡೆಸಿದ್ದರಿಂದ ಪ್ರತ್ತುತ್ತರವಾಗಿ ಗುಂಡಿನ ದಾಳಿ ನಡೆಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕಾಬೂಲ್ ಏರ್ ಪೋರ್ಟ್ ಬಳಿ ಐಸಿಸ್-ಕೆ ರಾಕೆಟ್ ದಾಳಿ – ಇಬ್ಬರ ಸಾವು
Advertisement
Advertisement
ಖ್ಯಾತ ಸಂಗೀತಗಾರನನ್ನು ಹತ್ಯೆಗೈದ ಬಳಿಕ ಇದೀಗ ಅಫ್ಘಾನಿಸ್ತಾನದ ಕಂದಹಾರ್ ನಲ್ಲಿ ಮಹಿಳೆಯರ ಧ್ವನಿಯನ್ನು ಬ್ಯಾನ್ ಮಾಡಲಾಗಿದೆ. ಟಿವಿ, ರೇಡಿಯೋಗಳಲ್ಲಿ ಎಲ್ಲೂ ಸಂಗೀತ ಹಾಗೂ ಮಹಿಳೆಯರ ಧ್ವನಿ ಕೇಳುವಂತಿಲ್ಲ ಎಂದು ತಾಲಿಬಾನಿಗಳು ಹೇಳಿದ್ದಾರೆ. ಆಗಸ್ಟ್ 15ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಬಳಿಕ ಕೆಲ ಟಿವಿ ವಾಹಿನಿಗಳು ಮಹಿಳಾ ನಿರೂಪಕಿಯರನ್ನು ಕೆಲಸದಿಂದ ತೆಗೆದುಹಾಕಿವೆ. ಅಲ್ಲದೆ ಕಾಬೂಲ್‍ನಲ್ಲಿನ ಸ್ಥಳೀಯ ಮೀಡಿಯಾಗಳಲ್ಲಿ ಹಲವು ಮಹಿಳೆಯರನ್ನು ಮನೆಗೆ ಕಳುಹಿಸಿವೆ. ಇದನ್ನೂ ಓದಿ: ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ?