ನವದೆಹಲಿ: ವಾಹನಗಳಿಗೆ ಬಳಸುವ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್ಜಿ) ಮತ್ತು ಕೊಳವೆ ಮೂಲಕ ಮನೆಗಳಿಗೆ ಪೂರೈಕೆಯಾಗುವ ಅಡುಗೆ ಅನಿಲ (ಪಿಎನ್ಜಿ) ದರ ಇದೀಗ ಮತ್ತಷ್ಟು ದುಬಾರಿಯಾಗಿದೆ. ಇಂದು ಪ್ರತಿ ಕೆ.ಜಿಗೆ ತಲಾ 3 ರೂ. ಏರಿಕೆ ಮಾಡಲಾಗಿದೆ.
Advertisement
Advertisement
ವಿದ್ಯುತ್ ಉತ್ಪಾದನೆ, ರಸಗೊಬ್ಬರ ತಯಾರಿಕೆ ಹಾಗೂ ವಾಹನಗಳ ಸಂಚಾರಕ್ಕೆ ಸಿಎನ್ಜಿಯಾಗಿ ಪರಿವರ್ತಿಸಲಾಗುವ ನೈಸರ್ಗಿಕ ಅನಿಲ ದರವು 3 ರೂ. ಏರಿಕೆ ಕಂಡು ದೆಹಲಿಯಲ್ಲಿ ಕೆ.ಜಿಗೆ 78.61ಕ್ಕೆ ತಲುಪಿದೆ. ಈ ಮೂಲಕ 2021ರ ಮಾರ್ಚ್ ಬಳಿಕ 14ನೇ ಬಾರಿ ಸಿಎನ್ಜಿ ಗ್ಯಾಸ್ ದರ ಏರಿಕೆ ಕಂಡಂತಾಗಿದೆ. ಇದನ್ನೂ ಓದಿ: ‘ಆದಿ ಪುರುಷ್’ ಬೆನ್ನಿಗೆ ನಿಂತ ರಾಜ್ ಠಾಕ್ರೆ ಸೇನೆ: ನಿಜವಾದ ರಾವನನ್ನು ಬಿಜೆಪಿ ನೋಡಿದ್ಯಾ?
Advertisement
Indraprastha Gas Limited (IGL) has hiked the price of Compressed Natural Gas (CNG) in Delhi by Rs 3 per kg to Rs 78.61 per Kg.
For Noida, Greater Noida & Ghaziabad, the CNG price has been hiked to Rs 81.17 per Kg, while in Gurugram, it will cost Rs 86.94 per Kg. https://t.co/ixfRby4cOc pic.twitter.com/8Tlz6xSf9A
— ANI (@ANI) October 8, 2022
Advertisement
ಸಿಎನ್ಜಿ ಜೊತೆ ಪಿಎನ್ಜಿ ದರ ಕೂಡ 3 ರೂ. ಏರಿಕೆ ಕಂಡು ದೆಹಲಿಯಲ್ಲಿ 53.59 ರೂ.ಗೆ ತಲುಪಿದೆ. ಈ ಮೂಲಕ 2021ರ ಆಗಸ್ಟ್ ಬಳಿಕ ಸತತ 10ನೇ ಬಾರಿ ಏರಿಕೆ ಕಂಡಂತಾಗಿದೆ. ಈ ಬಗ್ಗೆ ಚಿಲ್ಲರೆ ವ್ಯಾಪಾರ ಮಾಡುವ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಹೊಸ ದರವನ್ನು ಪ್ರಕಟಿಸಿದೆ. ಇದನ್ನೂ ಓದಿ: 20 ವರ್ಷಗಳ ಹಿಂದೆ ಮದರಸಾದಲ್ಲಿ ಹಿಂದೂಗಳು ಪೂಜೆ ಮಾಡಿದ ವೀಡಿಯೋ ವೈರಲ್