– ಸಿಎನ್‌ಜಿ ಬಂಕ್ ಸಂಖ್ಯೆ ಹೆಚ್ಚಿಸುವಂತೆ ವಾಹನ ಮಾಲೀಕರ ಮನವಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ದಿನದಿಂದ ದಿನಕ್ಕೆ ವಾಹನ ಸಂಖ್ಯೆ ವಿಪರೀತ ಹೆಚ್ಚಳವಾಗುತ್ತಿದೆ. ಈ ವಾಹನಗಳಿಗೆ ಬೇಕಾಗೋವ ಕಚ್ಚಾತೈಲಗಳನ್ನು ಬಳಸುವವರ ಸಂಖ್ಯೆಯೂ ಅಧಿಕವಾಗಿದೆ. ಇತ್ತೀಚಿನ ದಿನಗಳಲ್ಲಿ ವಾಹನಗಳಲ್ಲಿ ಸಿಎನ್‌ಜಿ ಗ್ಯಾಸ್ (CNG Gas) ಬಳಕೆ ಹೆಚ್ಚಾಗುತ್ತಿದೆ. ಆದರೆ ಬೆಂಗಳೂರಲ್ಲಿ ಸಿಎನ್ ಜಿ ಗ್ಯಾಸ್‌ಗಾಗಿ ವಾಹನ ಸವಾರರು ಕಿಲೋಮೀಟರ್ ಗಟ್ಟಲೇ ನಿಲ್ಲೋ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರು ನಗರದಲ್ಲಿ ಎರಡು ಲಕ್ಷ ಆಟೋಗಳಿದ್ದು, ಇತ್ತೀಚಿಗೆ ಬರುತ್ತಿರುವ ಆಟೋಗಳು ಸಿಎನ್‌ಜಿ ಗ್ಯಾಸ್ ಬಳಸುತ್ತಿವೆ. ಸಾವಿರಾರು ಟ್ಯಾಕ್ಸಿ ಹಾಗೂ ಬೈಕ್‌ಗಳು ಸಹ ಎಲ್‌ಪಿಜಿ ಬದಲಾಗಿ ಸಿಎನ್‌ಜಿ ಬಳಸುತ್ತಿವೆ. ಆದರೆ ರಾಜಧಾನಿಯಲ್ಲಿ 77 ಬಂಕ್‌ಗಳಿದ್ದು, ಹೆಚ್ಚಿನ ಬಂಕ್‌ಗಳು ನಗರದಿಂದ ಹೊರಭಾಗದಲ್ಲಿವೆ. ಹೀಗಾಗಿ ಗಂಟೆಗಟ್ಟಲೇ ಗ್ಯಾಸ್‌ಗಾಗಿ ಕಾಯೋ ಸ್ಥಿತಿ, ಆರೇಳು ಕಿಲೋಮೀಟರ್ ಗ್ಯಾಸ್‌ಗಾಗಿ ಓಡಾಡೋ ಪರಿಸ್ಥಿತಿ ಇದ್ದು, ಬಂಕ್‌ಗಳ ಸಂಖ್ಯೆ ಹೆಚ್ಚು ಮಾಡಿ ಅಂತಾ ಆಟೋ ಸಂಘಟನೆಗಳು ಮನವಿ ಮಾಡಿವೆ. ಇದನ್ನೂ ಓದಿ: ಚಿತ್ರದುರ್ಗ| ಕಾರು-ಕ್ಯಾಂಟರ್ ಲಾರಿ ಮುಖಾಮುಖಿ ಡಿಕ್ಕಿ; ನಾಲ್ವರು ದುರ್ಮರಣ
ಸಿಎನ್‌ಜಿ ಅಂದರೆ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್. ಪ್ರಮುಖವಾಗಿ ಈ ಸಿಎನ್‌ಜಿಯನ್ನು ಇತ್ತೀಚಿನ ದಿನಗಳಲ್ಲಿ ಬರುವ ಬಹುತೇಕ ಆಟೋಗಳಲ್ಲಿ, ಕಾರು ಹಾಗೂ ಬೈಕ್‌ಗಳಲ್ಲಿ ಬಳಸಲಾಗುತ್ತದೆ. ಪೆಟ್ರೋಲ್, ಡೀಸೆಲ್‌ಗಳಿಗೆ ಹೋಲಿಸಿದ್ರೇ ಸಿಎನ್‌ಜಿ ಬೆಲೆಯೂ ಕಡಿಮೆ. ಹೆಚ್ಚು ಮೈಲೇಜ್ ಬರುತ್ತೆ ಹೀಗಾಗಿ ಹೆಚ್ಚು ಜನ ಬಳಸುತ್ತಿದ್ದಾರೆ. ಆದರೆ ಬೆಂಗಳೂರು ನಗರದ ಒಳಗೆ ಸಿಎನ್‌ಜಿ ಬಂಕ್‌ಗಳ ಸಂಖ್ಯೆ ಕಡಿಮೆಯಾಗಿದೆ. ನಗರದಲ್ಲಿ ಒಟ್ಟು ಎರಡು ಲಕ್ಷ ಆಟೋಗಳು, ಸಾವಿರಾರು ಟ್ಯಾಕ್ಸಿಗಳಿವೆ. ಆದರೆ ಸಿಎನ್‌ಜಿ ಬಂಕ್‌ಗಳ ಸಂಖ್ಯೆ ಕೇವಲ 77 ಇದೆ. ಹೀಗಾಗಿ ಕಿಲೋಮೀಟರ್ ಉದ್ದಕ್ಕೆ ವಾಹನ ಸವಾರರು ಗ್ಯಾಸ್‌ಗಾಗಿ ಕಾಯೋ ಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಪ್ರೀತಿ ಹೆಸರಲ್ಲಿ JDS ಮುಖಂಡೆ ಪುತ್ರನಿಂದ ಕಿರುಕುಳ – ಯುವತಿ ಆತ್ಮಹತ್ಯೆ
ಬೆಂಗಳೂರಲ್ಲಿ ಹೆಚ್ಚಾಗಿ ನಗರದ ಹೊರಭಾಗದಲ್ಲಿ ಸಿಎನ್‌ಜಿ ಬಂಕ್‌ಗಳಿವೆ. ನಗರದ ಒಳಗೆ ಇರೋ ಬಂಕ್‌ಗಳು ಸುಮಾರು ಏಳೆಂಟು ಕಿಲೋಮೀಟರ್‌ಗೆ ಒಂದರಂತೆ ಇದ್ದು, ಇರೋ ಬಂಕ್‌ಗಳ ಮುಂದೆ ಬಾಡಿಗೆ ಬಿಟ್ಟು ತಾಸುಗಟ್ಟಲೇ ಕಾಯೋ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಬಂಕ್‌ಗಳ ಮುಂದಿನ ರೋಡ್‌ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಚಳಿಗಾಲವಾಗಿರುವುದರಿಂದ ಹೆಚ್ಚಿನ ಪ್ರೇಜರ್ ಇರೋ ಸಿಎನ್‌ಜಿ ಬಂಕ್‌ಗಳತ್ತ ಚಾಲಕರು ಮುಖ ಮಾಡುತ್ತಿದ್ದಾರೆ. ಬಂಕ್‌ಗಳ ಸಂಖ್ಯೆ ಹೆಚ್ಚಿಸಿ ಅಂತಾ ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಮೆರಿಕದ ಮಿಸಿಸಿಪ್ಪಿಯಲ್ಲಿ ಸರಣಿ ಗುಂಡಿನ ದಾಳಿಗೆ 6 ಮಂದಿ ಬಲಿ

