CNG, PNG ದರ ಮತ್ತಷ್ಟು ದುಬಾರಿ: ಎಲ್ಲಿ ಎಷ್ಟು ದರ..?

Public TV
1 Min Read
CNG PNG

ನವದೆಹಲಿ: ಕಳೆದ 10 ದಿನಗಳಿಂದಲೂ ಪೆಟ್ರೋಲ್, ಡೀಸೆಲ್ ದರ ಸತತವಾಗಿ ಏರಿಕೆಯಾಗುತ್ತಿದೆ. ಇದರೊಂದಿಗೆ ಯುಗಾದಿ ಹಬ್ಬಕ್ಕೂ ಮುನ್ನವೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ 250 ರೂ.ನಷ್ಟು ಏರಿಕೆಯಾಗಿದೆ.

ಇದೀಗ ಕಳೆದ ವಾರವಷ್ಟೇ ಏರಿಕೆಯಾಗಿದ್ದ ಸಿಎನ್‌ಜಿ (ವಾಹನಗಳಿಗೆ ಬಳಸುವ ಸಂಕುಚಿತ ನೈಸರ್ಗಿಕ ಅನಿಲ) ಮತ್ತು ಪಿಎನ್‌ಜಿ (ಕೊಳವೆ ಮೂಲಕ ಮನೆಗಳಿಗೆ ಪೂರೈಕೆಯಾಗುವ ಅಡುಗೆ ಅನಿಲ) ದರ ಇದೀಗ ಮತ್ತಷ್ಟು ದುಬಾರಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬೆನ್ನಲ್ಲೇ ಇಂಧನ ದರ ಏರಿಕೆಯ ಬಿಸಿ ಮತ್ತಷ್ಟು ತಟ್ಟಿದೆ. ಇದನ್ನೂ ಓದಿ: ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಆಯ್ತು ಈಗ ಸಿಎನ್‌ಜಿ, ಪಿಎನ್‌ಜಿ ದರದಲ್ಲೂ ಏರಿಕೆ 

price

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಳೆದ ಎರಡು ವಾರಗಳಲ್ಲಿ 12ನೇ ಬಾರಿಗೆ ಭಾರತದಾದ್ಯಂತ ಇಂಧನ ಬೆಲೆಯನ್ನು ಹೆಚ್ಚಿಸಿವೆ. ಅಂತೆಯೇ ಸಿಎನ್‌ಜಿ ಹಾಗೂ ಪಿಎನ್‌ಜಿ ಅನಿಲ ದರವು 40 ಪೈಸೆ ಹೆಚ್ಚಳ ಕಂಡಿದೆ. ಇದನ್ನೂ ಓದಿ: ಏಷ್ಯಾದ ಅತೀ ದೊಡ್ಡ ಬಯೋ-ಸಿಎನ್‍ಜಿ ಸ್ಥಾವರ ಉದ್ಘಾಟಿಸಿದ ಮೋದಿ

ಸಿಎನ್‌ಜಿ ಅನಿಲ ದರವು ಪ್ರತಿ ಕೆಜಿಗೆ ದೆಹಲಿಯಲ್ಲಿ 64.11 ರೂ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲೂ 66-.68 ರೂ., ಮುಜಾಫರ್ ನಗರ, ಮೀರತ್ ಮತ್ತು ಶಿಮ್ಲಾದಲ್ಲಿ 71.36, ಗುರುಗ್ರಾಮ್‌ನಲ್ಲಿ 72.45 ರೂ., ರೇವರಿ 74.55 ರೂ., ಕರ್ನಾಲ್ ಹಾಗೂ ಕೈಥಾಲ್‌ನಲ್ಲಿ 72.78 ರೂ., ಕಾನ್‌ಪುರ, ಹಮೀರ್‌ಪುರ್ ಹಾಗೂ ಫತೇಪುರ್ ನಲ್ಲಿ 75.90 ರೂ., ಅಜ್ಮೀರ್, ಪಾಲಿ ಹಾಗೂ ರಾಜ್‌ಸಮಂದ್‌ನಲ್ಲಿ 74.39 ರೂ.ಗೆ ಮಾರಾಟವಾಗುತ್ತಿರುವುದು ಕಂಡುಬಂದಿದೆ.

Share This Article