– ಸರಳ, ಸುಂದರ, ಸಂಸ್ಕೃತಿಯ ಭಾಷೆ ನಮ್ಮದು
ಬೆಂಗಳೂರು: ಅನ್ಯ ಭಾಷಿಗರು ಕನ್ನಡ ಭಾಷೆ ಕಲಿಯಬೇಕು. ಸರಳ, ಸುಂದರ, ಸಂಸ್ಕೃತಿಯ ಭಾಷೆ ನಮ್ಮದು ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಗೋಕಾಕ್ ಚಳುವಳಿಯ ಸ್ಮರಣಾರ್ಥ ಉದ್ಯಾನವನದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಸಲಾಗಿದೆ. ಬಿಜೆಪಿ ಯುವ ಮುಖಂಡರಾದ ವಿಶಾಲ್‍ರವರು ಕನ್ನಡ ಧ್ವಜಾರೋಹಣ ಮಾಡಿ ನಂತರ ತಾಯಿ ಭುವನೇಶ್ವರಿ ಬಾವಚಿತ್ರಕ್ಕೆ ಮತ್ತು ಮೇರುನಟ ಡಾ. ರಾಜ್‍ಕುಮಾರ್ ಪ್ರತಿಮೆಗೆ ಮತ್ತು ಪುನೀತ್ ರಾಜ್‍ಕುಮಾರ್ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕನ್ನಡಾಭಿಮಾನಿಗಳು ಮತ್ತು ಬಿ.ಜೆ.ಪಿ.ಪ್ರಮುಖರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್
Advertisement
ಜನತೆಯ ಮನೆ ಬಾಗಿಲಿಗೆ ಸರ್ಕಾರದ ಸೇವೆ ತಲುಪಿಸುವ ನಿಟ್ಟಿನಲ್ಲಿ “ಜನ ಸೇವಕ” ಯೋಜನೆಗೆ ಮಲ್ಲೇಶ್ವರದಲ್ಲಿ ಮಾನ್ಯ ಮುಖ್ಯಮಂತ್ರಿ @BSBommai ಅವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
BBMPಯ 198 ವಾರ್ಡ್‌ಗಳಲ್ಲಿ ಈ ಯೋಜನೆ ಆರಂಭವಾಗುತ್ತಿದೆ.
ಅಗತ್ಯ ಸೇವೆಗಳಿಗಾಗಿ ವೆಬ್ ಪೋರ್ಟಲ್ ಸಂಪರ್ಕಿಸಬಹುದುhttps://t.co/MfX1D74bDg pic.twitter.com/UBkzknWHu0
— Dr. Ashwathnarayan C. N. (@drashwathcn) November 1, 2021
Advertisement
ಡಾ.ಸಿ.ಎನ್.ಅಶ್ವಥ್ ನಾರಾಯಣ್ ರವರು ಮಾತನಾಡಿ ಕನ್ನಡ ಭಾಷೆ 2500ವರ್ಷಗಳ ಇತಿಹಾಸವಿರುವ ಪ್ರಾಚಿನ ಭಾಷೆಯಾಗಿದೆ. ಕನ್ನಡ ಭಾಷೆಗೆ 8ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಅನ್ಯ ಭಾಷಿಗರು ಕನ್ನಡ ಕಲಿಯಬೇಕು. ನಮ್ಮ ಭಾಷೆ ಸರಳ, ಸುಂದರ ಮತ್ತು ಸಂಸ್ಕೃತಿವುಳ್ಳ ಭಾಷೆ ಕಲಿಯುವುದು ಸುಲಭ.ಕನ್ನಡ ಭಾಷೆ ಉಳಿಸಿ, ಬೆಳಸುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ – ಅಭಿಮಾನಿಗಳಿಗಾಗಿ ಥಿಯೇಟರ್‌ಗೆ ಬಂದ `ರಾಜಕುಮಾರ’
Advertisement
ನಾಗರಿಕರ ಮನೆಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿ @BSBommai ಅವರ ನೇತೃತ್ವದಲ್ಲಿ “ಜನ ಸೇವಕ” ಆನ್ ಲೈನ್ ಪೋರ್ಟಲ್ ಲೋಕಾರ್ಪಣೆ ಮಾಡಲಾಯಿತು.
ಅಗತ್ಯ ಪ್ರಮಾಣಪತ್ರಗಳು ಹಾಗೂ 8 ಇಲಾಖೆಗಳ 58 ಸೇವೆಯನ್ನು ಇದರಡಿ ನೀಡಲಾಗುತ್ತಿದ್ದು, ಜನತೆ ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಿಕೆ. pic.twitter.com/qgfaC1hsAP
— Dr. Ashwathnarayan C. N. (@drashwathcn) November 1, 2021
Advertisement
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ಸಚಿವರಾದ ಡಾ. ಸಿ.ಎನ್.ಅಶ್ವಥ್ ನಾರಾಯಣ್, ಅರಮನೆನಗರ ವಾರ್ಡ್ ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಸುಮಂಗಲ ಕೇಶವ್, ಬೆಂಗಳೂರು ಉತ್ತರ ಜಿಲ್ಲಾ ಬಿ.ಜೆ.ಪಿ.ವಿಶೇಷ ಆಹ್ವಾನಿತರಾದ ಕೇಶವ್ ಐತಾಳ್ ಮತ್ತು ಮಲ್ಲೇಶ್ವರಂ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ಕಾವೇರಿ ಕೇದರನಾಥ್‍ರವರು ಭಾಗಿಯಾಗಿದ್ದರು. ಇದನ್ನೂ ಓದಿ: ಆಸ್ಪತ್ರೆಯಿಂದ ರಜನಿಕಾಂತ್ ಡಿಸ್ಚಾರ್ಜ್ – ಮನೆಗೆ ಆಗಮಿಸಿ ದೇವರಿಗೆ ಪ್ರಾರ್ಥನೆ