Chitradurga

ಸಂಪುಟ ರಚನೆ ಪ್ರದೇಶಕ್ಕೆ ಅನುಗುಣವಾಗಿ ಹೈಕಮಾಂಡ್ ನಿರ್ಣಯಿಸಲಿದೆ: ಅಶ್ವಥ್ ನಾರಾಯಣ್

Published

on

Share this

ಚಿತ್ರದುರ್ಗ: ಆಯಾ ಪ್ರದೇಶಕ್ಕೆ ಅನುಗುಣವಾಗಿ ಸಂಪುಟ ರಚನೆಯನ್ನು ಹೈಕಮಾಂಡ್ ನಿರ್ಣಯಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಜಿಟಿಟಿಸಿ ಕಾಲೇಜು ಉದ್ಘಾಟನೆ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಜರಾತ್ ಮಾದರಿ ಸಚಿವ ಸಂಪುಟ ರಚನೆಯಾಗಬೇಕೆಂಬ ಮಾಜಿ ಸಚಿವ ರೇಣುಕಾಚಾರ್ಯ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಅಲ್ಲಿನ ಪರಿಸ್ಥಿತಿ, ಪ್ರದೇಶಕ್ಕೆ ಅನುಗುಣವಾಗಿ ಹೈಕಮಾಂಡ್ ಸಂಪುಟ ವಿಸ್ತರಣೆ ವಿಚಾರದಲ್ಲಿ ನಿರ್ಣಯಿಸಲಿದೆ. ಅಲ್ಲದೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಅಭಿಪ್ರಾಯಕ್ಕೂ ಅವಕಾಶವಿದೆ. ಹಾಗೆಯೇ ಯಾವ ಸಮಯದಲ್ಲಿ ಯಾರಿಗೇನು ಸ್ಥಾನ ನೀಡಬೇಕೆಂದು ಪಕ್ಷ ನಿರ್ಧರಿಸುತ್ತದೆ. ಎಲ್ಲರಿಗೂ ಅವಕಾಶ ಸಿಗಬೇಕು ಎಂಬುದು ಒಳ್ಳೆಯದು. ಜೊತೆಗೆ ಯಾವುದೇ ಅವಕಾಶ ಸಿಕ್ಕಾಗ ಸಮಯ ವ್ಯರ್ಥ ಮಾಡದೆ ಜನಪರ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಕೆಲಸ ಮಾಡದೇ ಕೇವಲ ಮಾತನಾಡುವ ಸಚಿವರ ಕಿವಿ ಹಿಂಡಿದರು. ಇದನ್ನೂ ಓದಿ:  ವೃದ್ಧೆಯ ಹತ್ಯೆ ಮಾಡಿ ಮೃತದೇಹದೊಂದಿಗೆ ಯುವಕ ಸೆಕ್ಸ್!

ಇದೇ ವೇಳೆ ಧಾರ್ಮಿಕ ಕಟ್ಟಡ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 2009ರ ನಂತರದ ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ಅವಕಾಶವಿಲ್ಲ. ಇದನ್ನು ಸುಪ್ರೀಂಕೋರ್ಟ್ ಜಡ್ಜ್ ಮೆಂಟ್ ಮಾಡಿದೆ.ಹೀಗಾಗಿ ಎಲ್ಲಾ ಸರ್ಕಾರಗಳ ಕಾಲದಲ್ಲೂ ಈ ಬಗ್ಗೆ ಅಫಿಡವಿಟ್ ಸಲ್ಲಿಕೆಯಾಗಿದೆ. ಆದರೆ ಈ ವಿಚಾರವಾಗಿ ಕೆಲ ವ್ಯಕ್ತಿಗಳು ಮಾಹಿತಿ ಕೊರತೆಯಿಂದ ಮಾತಾಡುತ್ತಾರೆ. ಆದರೆ ದೇಗುಲ ತೆರವು ಆದೇಶ ನಮ್ಮ ಸರ್ಕಾರದಲ್ಲಿ ಆಗಿದ್ದಲ್ಲಎಂದು ಸ್ಪಷ್ಟಪಡಿಸಿದರು. ಈ ವೇಳೆ ಅವರೊಂದಿಗೆ ಶಾಸಕರಾದ ತಿಪ್ಪಾರೆಡ್ಡಿ, ಪೂರ್ಣಿಮ ಇದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement