ಚಿತ್ರದುರ್ಗ: ಆಯಾ ಪ್ರದೇಶಕ್ಕೆ ಅನುಗುಣವಾಗಿ ಸಂಪುಟ ರಚನೆಯನ್ನು ಹೈಕಮಾಂಡ್ ನಿರ್ಣಯಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.
NEP ಅತ್ಯಾಧುನಿಕವಾಗಿದ್ದು, ಜಾಗತಿಕ ಗುಣಮಟ್ಟದ್ದಾಗಿದೆ.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕೋರ್ಸ್ ಗೆ ಕಾಂಬಿನೇಶನ್ ಇದೆ. ಆದರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೋರ್ಸ್ ಆ್ಯಂಡ್ ಕಾಂಬಿನೇಶನ್‍ನಿಂದ ಕೋರ್ಸ್ ಆ್ಯಂಡ್ ಸಬ್ಜೆಕ್ಟ್ ಗೆ ಬದಲಾಯಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ತಮಗಿಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. pic.twitter.com/Hvf9aFLRqM
— Dr. Ashwathnarayan C. N. (@drashwathcn) September 18, 2021
Advertisement
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಜಿಟಿಟಿಸಿ ಕಾಲೇಜು ಉದ್ಘಾಟನೆ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಜರಾತ್ ಮಾದರಿ ಸಚಿವ ಸಂಪುಟ ರಚನೆಯಾಗಬೇಕೆಂಬ ಮಾಜಿ ಸಚಿವ ರೇಣುಕಾಚಾರ್ಯ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಅಲ್ಲಿನ ಪರಿಸ್ಥಿತಿ, ಪ್ರದೇಶಕ್ಕೆ ಅನುಗುಣವಾಗಿ ಹೈಕಮಾಂಡ್ ಸಂಪುಟ ವಿಸ್ತರಣೆ ವಿಚಾರದಲ್ಲಿ ನಿರ್ಣಯಿಸಲಿದೆ. ಅಲ್ಲದೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಅಭಿಪ್ರಾಯಕ್ಕೂ ಅವಕಾಶವಿದೆ. ಹಾಗೆಯೇ ಯಾವ ಸಮಯದಲ್ಲಿ ಯಾರಿಗೇನು ಸ್ಥಾನ ನೀಡಬೇಕೆಂದು ಪಕ್ಷ ನಿರ್ಧರಿಸುತ್ತದೆ. ಎಲ್ಲರಿಗೂ ಅವಕಾಶ ಸಿಗಬೇಕು ಎಂಬುದು ಒಳ್ಳೆಯದು. ಜೊತೆಗೆ ಯಾವುದೇ ಅವಕಾಶ ಸಿಕ್ಕಾಗ ಸಮಯ ವ್ಯರ್ಥ ಮಾಡದೆ ಜನಪರ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಕೆಲಸ ಮಾಡದೇ ಕೇವಲ ಮಾತನಾಡುವ ಸಚಿವರ ಕಿವಿ ಹಿಂಡಿದರು. ಇದನ್ನೂ ಓದಿ: ವೃದ್ಧೆಯ ಹತ್ಯೆ ಮಾಡಿ ಮೃತದೇಹದೊಂದಿಗೆ ಯುವಕ ಸೆಕ್ಸ್!
Advertisement
ಚಿತ್ರದುರ್ಗದ ಚಳ್ಳಕೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (GTTC) ಉದ್ಘಾಟನೆ ನೆರವೇರಿಸಲಾಯಿತು. ಇಂಜಿನಿಯರಿಂಗ್ ನಲ್ಲಿ AI & ML ಕೋರ್ಸ್ ಗಳಿಗೆ ಆದ್ಯತೆ ನೀಡಿ ಪ್ರಸ್ತುತ ಜಾಗತಿಕ ಅಗತ್ಯತೆಗೆ ತಕ್ಕಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. pic.twitter.com/jGWoOQZMIC
— Dr. Ashwathnarayan C. N. (@drashwathcn) September 18, 2021
Advertisement
ಇದೇ ವೇಳೆ ಧಾರ್ಮಿಕ ಕಟ್ಟಡ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 2009ರ ನಂತರದ ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ಅವಕಾಶವಿಲ್ಲ. ಇದನ್ನು ಸುಪ್ರೀಂಕೋರ್ಟ್ ಜಡ್ಜ್ ಮೆಂಟ್ ಮಾಡಿದೆ.ಹೀಗಾಗಿ ಎಲ್ಲಾ ಸರ್ಕಾರಗಳ ಕಾಲದಲ್ಲೂ ಈ ಬಗ್ಗೆ ಅಫಿಡವಿಟ್ ಸಲ್ಲಿಕೆಯಾಗಿದೆ. ಆದರೆ ಈ ವಿಚಾರವಾಗಿ ಕೆಲ ವ್ಯಕ್ತಿಗಳು ಮಾಹಿತಿ ಕೊರತೆಯಿಂದ ಮಾತಾಡುತ್ತಾರೆ. ಆದರೆ ದೇಗುಲ ತೆರವು ಆದೇಶ ನಮ್ಮ ಸರ್ಕಾರದಲ್ಲಿ ಆಗಿದ್ದಲ್ಲಎಂದು ಸ್ಪಷ್ಟಪಡಿಸಿದರು. ಈ ವೇಳೆ ಅವರೊಂದಿಗೆ ಶಾಸಕರಾದ ತಿಪ್ಪಾರೆಡ್ಡಿ, ಪೂರ್ಣಿಮ ಇದ್ದರು.