Bengaluru City
ಸಿಎಂ ದೇಹದಲ್ಲಿ ಮೀಟರ್ ಎಲ್ಲಿದೆ ತೋರಿಸಿ: ಆರ್‍ಟಿಐ ಅರ್ಜಿ ಸಲ್ಲಿಕೆ

ಬೆಂಗಳೂರು: ಬಿಜೆಪಿಯವರಿಗೆ ಮೀಟರ್ ಇಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮೀಟರ್ ಎಲ್ಲಿದೆ ತೋರಿಸಿ ಆರ್‍ಟಿಐ ಅರ್ಜಿ ಸಲ್ಲಿಕೆಯಾಗಿದೆ.
ಆರ್‍ಟಿಐ ಕಾರ್ಯಕರ್ತ ಮಂಜುನಾಥ್ ಅವರು ಮಂಡ್ಯ ಜಿಲ್ಲಾಧಿಕಾರಿಗಳ ಮೂಲಕ ವಿಧಾನ ಸೌಧದ ಮುಖ್ಯಮಂತ್ರಿಗಳ ಕಚೇರಿಗೆ ತಲುಪಿಸಿ ಎಂದು ಅರ್ಜಿ ಸಲ್ಲಿಸಿದ್ದಾರೆ.
ಮಾನವನ ದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶ, ಮೂತ್ರಪಿಂಡಗಳ ರಚನೆ ಹಾಗು ಅವುಗಳ ಕಾರ್ಯದ ಬಗ್ಗೆ ತಿಳಿದುಕೊಂಡಿದ್ದೇನೆ. ಆದರೆ ಮೀಟರ್ ಬಗ್ಗೆ ತಿಳಿದುಕೊಳ್ಳಲು ನಾನು ಸೇರಿದಂತೆ ಜೀವಶಾಸ್ತ್ರ ಅಧ್ಯಯನ ಮಾಡುತ್ತಿರುವ ಅನೇಕ ವಿದ್ಯಾರ್ಥಿಗಳು ಕಾತರರಾಗಿದ್ದೇವೆ. ಆದ್ದರಿಂದ ಸನ್ಮಾನ್ಯ ಸಿದ್ದರಾಮಯ್ಯನವರ ಅಂದವಾದ ಚಿತ್ರ ಬರೆದು, ದೇಹದ ಯಾವ ಭಾಗದಲ್ಲಿ ಮೀಟರ್ ಇದೆ ಎಂದು ಗುರುತಿಸಿ ಕೊಡಿ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
