ಬೆಂಗಳೂರು: ಏಳು ಕೋಟಿ ರೂ. ಹಣ ದರೋಡೆಯಾಗಿದ್ದರೂ ಹಣ ಸಾಗಿಸಿದ ಸಿಎಂಎಸ್ (CMS) ಸಂಸ್ಥೆ ಚಿಂತೆ ಮಾಡುವ ಅಗತ್ಯವಿಲ್ಲ.
ಡೈರಿ ಸರ್ಕಲ್ ಬಳಿ ಸಿಎಂಎಸ್ ಏಜೆನ್ಸಿಗೆ ಸೇರಿದ ಎಟಿಎಂ (ATM) ವಾಹನದಲ್ಲಿ ಏಳು ಕೋಟಿ ಹಣ ದರೋಡೆ ಮಾಡಿದ್ದರೂ ಸಂಸ್ಥೆ ದೊಡ್ಡ ಹೊಡೆತ ಬೀಳುವುದಿಲ್ಲ. ಇದಕ್ಕೆ ಕಾರಣ ಸಂಸ್ಥೆ ಮಾಡಿರುವ ಒಂದು ವಿಮೆ. ಅದುವೇ ರಾಬರಿ ಇನ್ಶೂರೆನ್ಸ್ (Robbery Insurance) ಪಾಲಿಸಿ. ಇದನ್ನೂ ಓದಿ: ಕಾಂಗ್ರೆಸ್ ಕುರ್ಚಿ ಕಿತ್ತಾಟಕ್ಕೆ ಮದ್ದೆರೆಯುತ್ತಾರಾ ಖರ್ಗೆ? – ಡಿಕೆ ಬ್ರದರ್ಸ್‌ಗೆ ತುರ್ತು ಬುಲಾವ್ – ಶನಿವಾರ ಸಿಎಂ-ಡಿಸಿಎಂ ಮುಖಾಮುಖಿ?
ಕಳ್ಳತನ, ದರೋಡೆ, ದಬ್ಬಾಳಿಕೆ, ಬಲವಂತದಿಂದ ಆಸ್ತಿ,ಹಣ, ಬೆಲೆಬಾಳುವ ವಸ್ತುಗಳನ್ನು ಕಳ್ಳರು ಕಸಿದುಕೊಂಡಾಗ ರಾಬರಿ ಇನ್ಶುರೆನ್ಸ್ ಕೇಳಬಹುದು.
ಜ್ಯುವೆಲ್ಲರಿ ಅಂಗಡಿಗಳು, ಪೆಟ್ರೋಲ್ ಬಂಕ್ ಗಳು, ಸೂಪರ್ ರ್ಮಾರ್ಕೆಟ್ ಗಳು, ಅಂಗಡಿಗಳು, ಬ್ಯಾಂಕ್ ಗಳು, ಹಾಗೂ ಫೈನಾನ್ಸ್ ಕಂಪನಿಗಳು, ದೊಡ್ಡ ಮೊತ್ತ ನಗದು ಅಥವಾ ವಸ್ತುಗಳನ್ನು ಸಾಗಾಟ ಮಾಡುವ ಸಂಸ್ಥೆಗಳು ಈ ರಾಬರಿ ಇನ್ಸ್ಶೂರೆನ್ಸ್ ಕ್ಲೈಮ್ ಮಾಡಿಕೊಳ್ಳುತ್ತವೆ.
