ಶ್ರೀನಗರ: ಮುಸ್ಲಿಮರಿಗೆ ಯಾರು ಹೆಚ್ಚು ತೊಂದರೆ ಕೊಡ್ತಾರೆ ಎಂಬುದನ್ನು ನೋಡಲು ದೇಶದ ಮುಖ್ಯಮಂತ್ರಿಗಳು ಪೈಪೋಟಿಗೆ ಬಿದ್ದಿದ್ದಾರೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಆರ್‌ಎಸ್‌ಎಸ್ ಕಾರ್ಯಕ್ರಮವೊಂದರಲ್ಲಿ ಅಸ್ಸಾಂ ಮುಖ್ಯಮಂತ್ರಿ ಬಿಸ್ವಾ ಶರ್ಮಾ ಮದರಸಾಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಾದ ಒಂದು ದಿನದ ಬಳಿಕ ಪ್ರತಿಕ್ರಿಯಿಸಿರುವ ಮುಫ್ತಿ ಮುಖ್ಯಮಂತ್ರಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯತೆ ಪರಿಕಲ್ಪನೆ ಸಂವಿಧಾನದಿಂದ ಬಂದಿಲ್ಲ, ಅದು ಪ್ರಾಚೀನ ಬೇರುಗಳನ್ನು ಹೊಂದಿದೆ: JNU ಕುಲಪತಿ
Advertisement
Advertisement
ಮುಸ್ಲಿಮರಿಗೆ ಯಾರು ಹೆಚ್ಚು ತೊಂದರೆ ಕೊಡ್ತಾರೆ ಎಂಬುದನ್ನು ನೋಡಲು ಸಿಎಂಗಳು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. ಹಾಗಾಗಿಯೇ ಮಂದಿರ, ಮಸೀದಿಗಳ ವಿಚಾರಗಳನ್ನು ಎತ್ತಲಾಗುತ್ತಿದೆ. ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಮುಸ್ಲಿಮರು ಪ್ರತಿಕ್ರಿಯಿಸುವಂತೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಜಿಲ್ಲಾ ನ್ಯಾಯಾಲಯದಿಂದ ನಾಳೆ ಮಹತ್ವದ ಆದೇಶ
Advertisement
Advertisement
ಬ್ರಿಟಿಷರಂತೆ ಬಿಜೆಪಿ: ಬ್ರಿಟಿಷರು ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುತ್ತಿದ್ದರು. ಬಿಜೆಪಿಯೂ ಈಗ ಅದನ್ನೇ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮೌನವಾಗಿ ನೋಡುತ್ತಿದ್ದಾರೆ. ಅವರ ಪಕ್ಷವು ಮಾಡುತ್ತಿರುವುದೇ ಸರಿ ಎಂದು ಭಾವಿಸುತ್ತಿದ್ದಾರೆ ಎಂದು ಕುಟುಕಿದ್ದಾರೆ.