ನವದೆಹಲಿ: ಉತ್ತರ ಪ್ರದೇಶ (Uttar Pradesh) ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಸೋಮವಾರ ದೆಹಲಿಯ ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿಯನ್ನು (Narendra Modi) ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದರು.
ಭೇಟಿಯ ಸಂದರ್ಭ ಯೋಗಿ ಪ್ರಧಾನಿ ಮೋದಿಗೆ ಮೀನಕರಿ ಕಲೆಯ ಮೂಲಕ ಸಿದ್ಧಪಡಿಸಿದ ರಾಮಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಪ್ರತಿಕೃತಿಯನ್ನು ಕುಂಜ್ ಬಿಹಾರಿ ಜಿ ತಯಾರಿಸಿದ್ದಾರೆ. ಬಳಿಕ ಇಬ್ಬರೂ ಸಂಪುಟ ವಿಸ್ತರಣೆ ಹಾಗೂ 2027ರ ಚುನಾವಣೆ ಕುರಿತು ಚರ್ಚಿಸಿದರು. ಭೇಟಿ ಬಳಿಕ ಯೋಗಿ ಆದಿತ್ಯನಾಥ್ ತಮ್ಮ ಟ್ವಿಟರ್ ಖಾತೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನವು ಹೊಸ ಉತ್ತರ ಪ್ರದೇಶದ ಅಭಿವೃದ್ಧಿ ಪಯಣವನ್ನು ಮತ್ತಷ್ಟು ಉತ್ತೇಜಿಸುತ್ತದೆ ಮತ್ತು ವೇಗಗೊಳಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಅಪರಾಧಿ ರಾಮ್ ರಹೀಮ್‌ಗೆ ಮತ್ತೆ ಬಿಡುಗಡೆ ಭಾಗ್ಯ – 15ನೇ ಬಾರಿಗೆ 40 ದಿನ ಪೆರೋಲ್

ಪ್ರಧಾನಮಂತ್ರಿಗಳ ಕಚೇರಿಯು ‘ಎಕ್ಸ್’ನಲ್ಲಿ ಭೇಟಿಯ ಎರಡು ಫೋಟೋಗಳನ್ನು ಹಂಚಿಕೊಂಡಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿಯವರನ್ನು ಭೇಟಿ ಮಾಡಿದ್ದರು ಎಂದು ತಿಳಿಸಿದೆ. ಸುಮಾರು ಒಂದು ಗಂಟೆಗಳ ಕಾಲ ಇಬ್ಬರೂ ನಾಯಕರ ನಡುವೆ ಮಾತುಕತೆ ನಡೆದಿದೆ. ಇದನ್ನೂ ಓದಿ: ರಾಜ್ಯದ ದೀರ್ಘಾವಧಿ ಸಿಎಂ – ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾದ ಸಿಎಂ

